
ಮೈಸೂರು (ಅ.29): ಮೋಹಿನ್ ಹಾಗೂ ಆತನ ತಂದೆ ಮೊಕ್ತಾರ್ ಅಹ್ಮದ್ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊನಿಷಾ ಪೋಷಕರು, ಆಕೆಯ ಸ್ನೇಹಿತ ಸಿರಾಜುಲ್ಲಾ ಕೈವಾಡವಿದೆಯಂದು ಆರೋಪಿಸಿದ್ದಾರೆ.
ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ತಂದೆ ಮಂಜುನಾಥ್, ತಾಯಿ ರಾಜೇಶ್ವರಿ, ಮೋನಿಷಾ ಸಿರಾಜ್ ನಡುವೆ ಯಾವುದೇ ರೀತಿಯ ಪ್ರೀತಿ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಇಡಿ ಪ್ರಕರಣದ ಹಿಂದೆ ಸಿರಾಜ್ ಕೈವಾಡವಿದೆ. ತಮ್ಮ ಮಗಳನ್ನು ಮುಂದಿಟ್ಟುಕೊಂಡು ಆತನೇ ಇದನ್ನು ಮಾಡಿದ್ದಾನೆ. ಅವನನ್ನು ಕರೆಸಿ ವಿಚಾರಿಸಿದರೆ ಸತ್ಯ ಹೊರ ಬೀಳುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ.
ಸಿರಾಜ್ ಮನೆಯಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿರಾಜ್, ಮೋಹಿನ್ ನಡುವೆ ಕಲಹ ನಡೆಯುತ್ತಿತ್ತು. ನಮ್ಮ ಮಗಳನ್ನು ಮುಂದಿಟ್ಟುಕೊಂಡು ಆತನೇ ಮೋಹಿನ್ ಹಾಗೂ ಅವನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ.ಆತನನ್ನು ಬಂಧಿಸಿದರೆ ಸತ್ಯಾಂಶ ಬಹಿರಂಗವಾಗುತ್ತದೆ ಎಂದು ಪೋಷಕರು ಆರೋಪಿಸಿದ್ದಾರೆ.
ಅಂತೆಯೇ ಅಕ್ಟೋಬರ್ 14 ರಂದು ಸಿರಾಜ್ ಮನೆಯಲ್ಲಿ ಮೊಹಿನ್ ಹಾಗೂ ಆತನ ನಡುವೆ ಗಲಾಟೆ ನಡೆಯುವಾಗ ನಮ್ಮ ಮಗಳು ಅನಿರೀಕ್ಷಿತವಾಗಿ ಹೋಗಿದ್ದಳು. ಆಗ ಮೊಯೀನ್ ಜಗಳ ಬಿಡಿಸಲು ಹೋದ ನಮ್ಮ ಮಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ನಂತರ ಪೋನ್ ಮಾಡಿ ಆತನೇ ಕ್ಷಮೆ ಕೇಳಿದ್ದಾನೆ ಎಂದೂ ಈ ಸಂದರ್ಭದಲ್ಲಿ ಪೋಷಕರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.