
ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಸಾಫ್ಟವೇರ್ ಉದ್ಯಮಕ್ಕೆ ಇರುವ ಅಪಾರ ಬಂಡವಾಳ ಆಕರ್ಷಣೆಯನ್ನು ಹಾರ್ಡ್‌ವೇರ್ ಉದ್ಯಮಕ್ಕೂ ವಿಸ್ತರಿಸುವ ಸಲುವಾಗಿ ಮುಂದಿನ ಐದು ವರ್ಷಗಳಿಗಾಗಿ ಕರ್ನಾಟಕ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಆಂಡ್ ಮಾನ್ಯುಫಾಕ್ಚರಿಂಗ್ ಪಾಲಿಸಿಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನೂತನ ನೀತಿಗೆ ಅನುಮೋದನೆ ನೀಡಲಾಗಿದೆ. 2017ರಿಂದ 2022ರವರಗೆ ಹಾರ್ಡ್‌ವೇರ್ ಪಾರ್ಕ್‌ಗಳ ಸ್ಥಾಪನೆಗೆ ಸರಿಸುಮಾರು 200 ಬಿಲಿಯನ್ ಡಾಲರ್ ಬಂಡವಾಳ ಆಕರ್ಷಣೆಯ ಗುರಿಯನ್ನು ಈ ನೀತಿಯಡಿ ಹೊಂದಲಾಗಿದೆ.
ಹೈಟೆಕ್ ಟೆಕ್ನಾಲಜಿ, ಥ್ರೀಡಿ ಪ್ರಿಂಟಿಂಗ್, ರೊಬೊಟಿಕ್ಸ್, ನ್ಯಾನೊ ತಂತ್ರಜ್ಞಾನ ಮತ್ತಿತರ ಹಾರ್ಡ್‌ವೇರ್ ಸಂಬಂಧಿ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ವಾತಾವರಣಕ್ಕೆ ಪೂರಕವಾಗಿ ಹಾರ್ಡ್‌ವೇರ್ ಪಾರ್ಕ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲು ಕೆಲ ತೆರಿಗೆ ವಿನಾಯಿತಿ, ಪ್ರೋತ್ಸಾಹಕರ ಜಮೀನು ಹಂಚಿಕೆ ನೀತಿ, ಮೂಲಸೌಕರ್ಯ ಸೃಷ್ಟಿ ಮತ್ತಿತರ ಸೌಲಭ್ಯ ಒದಗಿಸುವ ಅಂಶಗಳನ್ನು ನೀತಿ ಹೊಂದಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.