ಕೇರಳದಲ್ಲಿ  ಜನರಿಗಿಂತ ವೈದ್ಯರಿಗೇ ಬೇಗ ಸಾವು!

By Suvarna Web DeskFirst Published Nov 21, 2017, 8:38 PM IST
Highlights

ಕಾಯಿಲೆಗೆ ತುತ್ತಾದ ರೋಗಿಗಳನ್ನು ಗುಣಮುಖರಾಗಿಸುವಲ್ಲಿ ವೈದ್ಯರ ಸೇವೆ ಬಹುಮುಖ್ಯ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಅದೇ ರೀತಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನೆಲ್ಲ ಮಾಡಬೇಕೆಂದು ಗೊತ್ತಿರುವ ವೈದ್ಯರು ಹೆಚ್ಚು ವರ್ಷ ಬದುಕ್ತಾರೆ ಅಂದುಕೊಂಡ್ರೆ. ಅದು ತಪ್ಪಾಗುತ್ತೆ.

ಕೊಚ್ಚಿ: ಕಾಯಿಲೆಗೆ ತುತ್ತಾದ ರೋಗಿಗಳನ್ನು ಗುಣಮುಖರಾಗಿಸುವಲ್ಲಿ ವೈದ್ಯರ ಸೇವೆ ಬಹುಮುಖ್ಯ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು.

ಅದೇ ರೀತಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನೆಲ್ಲ ಮಾಡಬೇಕೆಂದು ಗೊತ್ತಿರುವ ವೈದ್ಯರು ಹೆಚ್ಚು ವರ್ಷ ಬದುಕ್ತಾರೆ ಅಂದುಕೊಂಡ್ರೆ. ಅದು ತಪ್ಪಾಗುತ್ತೆ.

ಹೌದು, ಕೇರಳದಲ್ಲಿರುವ ವೈದ್ಯರು ಇತರ ಸಾರ್ವಜನಿಕರಿಗಿಂತ ಸಣ್ಣ ಪ್ರಾಯದಲ್ಲೇ ಅಸುನೀಗುತ್ತಾರೆ ಎಂಬ ಅಚ್ಚರಿಯ ವಿಚಾರ ಅಧ್ಯಯನವೊಂದರಿಂದ ತಿಳಿಬಂದಿದೆ.

ಕೇರಳದ ವೈದ್ಯರು ಹೃದಯ ನಾಳ ಕಾಯಿಲೆ ಮತ್ತು ಕ್ಯಾನ್ಸರ್‌ನಿಂದಾಗಿ ಇತರ ಸಾರ್ವಜನಿಕರಿಗಿಂತ ಸಣ್ಣ ಪ್ರಾಯದಲ್ಲೇ ಸಾವನ್ನಪ್ಪುತ್ತಾರೆ ಎಂಬುದಾಗಿ ಭಾರತೀಯ ವೈದ್ಯರ ಸಂಘಟನೆ(ಐಎಂಎ) ವರದಿ ತಿಳಿಸಿದೆ.

ಭಾರತೀಯರ ಸರಾಸರಿ ಜೀವಿತಾವಧಿ 67.9 ವರ್ಷಗಳಾಗಿದ್ದು, ಮಲಯಾಳಿಗಳ ಜೀವಿತಾವಧಿ 74.9. ಆದರೆ, ಕೇರಳ ವೈದ್ಯರ ಸರಾಸರಿ ಜೀವಿತಾವಧಿ 61.75 ವರ್ಷವಷ್ಟೇ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ವಿನಯನ್ ಕೆ.ಪಿ., ‘ವೈದ್ಯರು ಹೆಚ್ಚು ಕಾಲ ಬದುಕುತ್ತಾರೆ ಎಂಬ ನಮ್ಮ ಊಹೆ ತಪ್ಪಾಗಿದೆ,’ ಎಂದಿದ್ದಾರೆ.

click me!