2018ಕ್ಕೆ ಚೀನಾದಿಂದ ವಿಶ್ವದ ಎಲ್ಲೆಡೆ ತಲುಪಬಲ್ಲ ಕ್ಷಿಪಣಿ

By Suvarna Web DeskFirst Published Nov 21, 2017, 8:31 PM IST
Highlights

ವಿಶ್ವದ ದೊಡ್ಡಣ್ಣನಾಗಲು ನಾನಾ ಸಾಹಸ ಪಡುತ್ತಿರುವ ಭಾರತದ ವೈರಿ ಚೀನಾ, ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯದ ಕ್ಷಿಪಣಿಯೊಂದನ್ನು ಮುಂದಿನ ವರ್ಷ ತನ್ನ ಸೇನೆಯ ಬತ್ತಳಿಕೆಗೆ ಸೇರಿಸುವ ಸಾಧ್ಯತೆ ಇದೆ.

ಬೀಜಿಂಗ್: ವಿಶ್ವದ ದೊಡ್ಡಣ್ಣನಾಗಲು ನಾನಾ ಸಾಹಸ ಪಡುತ್ತಿರುವ ಭಾರತದ ವೈರಿ ಚೀನಾ, ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯದ ಕ್ಷಿಪಣಿಯೊಂದನ್ನು ಮುಂದಿನ ವರ್ಷ ತನ್ನ ಸೇನೆಯ ಬತ್ತಳಿಕೆಗೆ ಸೇರಿಸುವ ಸಾಧ್ಯತೆ ಇದೆ.

ಡೋಂಗ್‌ಫೆಂಗ್ 41 ಹೆಸರಿನ ಈ ಕ್ಷಿಪಣಿ ಮ್ಯಾಕ್ 10 (ಗಂಟೆಗೆ 12438 ಕಿ.ಮೀ ವೇಗ) ವೇಗದಲ್ಲಿ 12000 ಕಿ.ಮೀ ದೂರ ಸಾಗಿ ಶತ್ರು ದೇಶಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇಂಥ ದಾಳಿ ವೇಳೆ ಶತ್ರು ದೇಶದ ಕ್ಷಿಪಣಿ ತಡೆ ವ್ಯವಸ್ಥೆಯನ್ನೇ ಭೇದಿಸಬಲ್ಲ ಶಕ್ತಿ ಇದಕ್ಕಿದೆ ಎನ್ನಲಾಗಿದೆ.

2012ರಲ್ಲಿ ಮೊದಲ ಬಾರಿ ಚೀನಾ ಇಂಥದ್ದೊಂದು ಕ್ಷಿಪಣಿಯ ಕುರಿತು ಮಾಹಿತಿ ನೀಡಿದ್ದು, ಇದೀಗ ಸರಣಿ ಪರೀಕ್ಷೆಗಳು ಯಶಸ್ವಿಯಾಗುವುದರೊಂದಿಗೆ 2018ರ ವೇಳೆಗೆ ಅದು ಸೇನೆಯ ಬತ್ತಳಿಕೆಗೆ ಸೇರಲಿದೆ.

ಈ ಕ್ಷಿಪಣಿ ಒಮ್ಮೆಗೆ 10 ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ದಾಳಿ ನಡೆಸಬಲ್ಲದಾಗಿದೆ. ಅಷ್ಟು ಮಾತ್ರವಲ್ಲ, ಎಲ್ಲಾ 10 ಅಣ್ವಸ್ತ್ರ ಸಿಡಿತಲೆಗಳನ್ನು ಬೇರೆ ಬೇರೆ ಪ್ರದೇಶಗಳ ಮೇಲೆ ದಾಳಿ ನಡೆಸಬಲ್ಲದಾಗಿದೆ.

click me!