ದಂಡ ಹೆಚ್ಚಾಯ್ತಾ? ಹಾಗಾದ್ರೆ ಸಂಚಾರ ನಿಯಮ ಪಾಲಿಸಿ: ಗಡ್ಕರಿ

By Web DeskFirst Published Sep 9, 2019, 9:01 AM IST
Highlights

ದಂಡ ಹೆಚ್ಚಾಯ್ತಾ? ಸಂಚಾರ ನಿಯಮ ಪಾಲಿಸಿ: ಗಡ್ಕರಿ| ಜೀವ ಎಷ್ಟುಅಮೂಲ್ಯ ಎಂದು ಅಪಘಾತ ಸಂತ್ರಸ್ತರ ಕೇಳಿ| ಜನ ಕಾನೂನಿಗೆ ಬೆಲೆ ಕೊಡ್ತಿಲ್ಲ, ಅದಕ್ಕೇ ಹೊಸ ನಿಯಮ

ನವದೆಹಲಿ[ಸೆ.09]: ಸಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಭಾರೀ ದಂಡ ವಿಧಿಸುತ್ತಿರುವ ಕ್ರಮವನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸಮರ್ಥಿಸಿಕೊಂಡಿದ್ದಾರೆ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆಗೆ ದೊಡ್ಡ ಮಟ್ಟದ ದಂಡ ವಿಧಿಸುವ ನೂತನ ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸಾರಿಗೆ ನಿಯಮಗಳನ್ನು ಪಾಲಿಸುವವರು ದಂಡಕ್ಕೆ ಹೆದರಬೇಕಾಗಿಲ್ಲ ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು ಗಡ್ಕರಿ, ಜನರು ಟ್ರಾಫಿಕ್‌ ನಿಯಮಗಳನ್ನು ಬಹಳ ಲಘುವಾಗಿ ಪರಿಗಣಿಸಿದ್ದರು. ಕಾನೂನಿನ ಬಗ್ಗೆ ಭಯ ಅಥವಾ ಗೌರವವಾಗಲಿ ಇರಲಿಲ್ಲ. ಹೀಗಾಗಿ ಇಂಥದ್ದೊಂದು ಕಠಿಣ ನಿಯಮ ಜಾರಿಗೆ ತರುವುದು ಅತ್ಯಂತ ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.

‘ನಾನು ಇಂದಿರಾ ಗಾಂಧಿ ಅವರಿಗೂ ಬಿಟ್ಟಿರಲಿಲ್ಲ : ದಂಡ ವಸೂಲಿ ಮಾಡಿದ್ದೆ’

ಇದೇ ವೇಳೆ, ಮಾನವನ ಜೀವನ ಅಮೂಲ್ಯವಾದ್ದಲ್ಲವೇ? ಎಂದು ಪ್ರಶ್ನಿಸಿದ ಅವರು, ರಸ್ತೆ ಅಪಘಾತದಲ್ಲಿ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡವರನ್ನು ಕೇಳಿನೋಡಿ ಅವರು ಏನು ಹೇಳುತ್ತಾರೆ ಎಂದು. ಅಪಘಾತದಲ್ಲಿ ಸಾವನ್ನಪ್ಪುವ ಶೇ.65ರಷ್ಟುಸಂತ್ರಸ್ತರು 18ರಿಂದ 35 ವರ್ಷದ ವಯಸ್ಸಿನವರಾಗಿದ್ದಾರೆ. ನಾನೂ ರಸ್ತೆ ಅಪಘಾತದ ಸಂತ್ರಸ್ತ. ಈ ವಿಷಯವಾಗಿ ನಾನು ಸಂವೇದನಾಶೀಲನಾಗಿದ್ದೇನೆ. ಸರಿಯಾಗಿ ಯೋಚಿಯಿಸಿಯೇ ಈ ಕಾಯ್ದೆ ಜಾರಿ ಮಾಡಲಾಗಿದೆ. ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಹೀಗೆ ಎಲ್ಲಾ ರಾಜಕೀಯ ಪಕ್ಷಗಳ ಸಲಹೆಯನ್ನು ಪಡೆದುಕೊಳ್ಳಲಾಗಿದೆ. ಭಾರತದ ರಸ್ತೆಗಳು ವಿದೇಶಗಳಂತೆ ಸುರಕ್ಷಿತವಾಗಿವೆ ಎಂದು ಸಂತಸ ಪಡಬೇಕು ಎಂದು ಹೇಳಿದ್ದಾರೆ.

ಕೆಲವೊಮ್ಮೆ ವಾಹನದ ಮೊತ್ತಕ್ಕಿಂತಲೂ ಅಧಿಕ ಪ್ರಮಾಣದ ದಂಡ ವಿಧಿಸುತ್ತಿರುವ ಪ್ರಕರಣಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಬಹುವಿಧ ಅಪರಾಧಕ್ಕೆ ಸವಾರರಿಗೆ ಪೊಲೀಸರು ಬೇರೆ ಬೇರೆ ರೀತಿಯ ದಂಡವನ್ನು ವಿಧಿಸಿದ್ದಾರೆ. ನನ್ನ ಗಮನಕ್ಕೆ ಬಂದ ಪ್ರಕರಗಳಲ್ಲಿ ವಾಹನ ಸವಾರರು ಲೈಸನ್ಸ್‌ ಹೊಂದಿಲ್ಲದೇ ಇರುವುದು, ಮಾಲಿನ್ಯ ಪ್ರಮಾಣ ಪತ್ರ ಇಲ್ಲದೇ ಇರುವುದು, ಇನ್ಶುರೆನ್ಸ್‌ ಹೀಗೆ ಅಗತ್ಯ ದಾಖಲೆಗಳನ್ನು ಹೊಂದಿಲ್ಲದೇ ಇರುವ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ: ಹೊಸ ಟ್ರಾಫಿಕ್ ರೂಲ್ಸ್, ಎರಡು ದಿನದಲ್ಲಿ 84,800 ರು. ದಂಡ ವಸೂಲಿ..!

ಇದೇ ವೇಳೆ ಇಂಟೆಲಿಜೆನ್ಸ್‌ ಟ್ರಾಫಿಕ್‌ ಸಿಸ್ಟಮ್‌ (ಕೃತಕ ಬುದ್ಧಿಮತ್ತೆ ಸಾರಿಗೆ ವ್ಯವಸ್ಥೆ) ಯಾರಿಗೂ ತಾರತಮ್ಯ ಮಾಡುವುದಿಲ್ಲ. ಕೇಂದ್ರ ಸಚಿವರಾಗಿರಲಿ, ಮುಖ್ಯಮಂತ್ರಿಯಾಗಿರಲಿ, ಅಧಿಕಾರಿಗಳೇ ಆಗಿರಲಿ ಸಾರಿಗೆ ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕು ಎಂದು ಗಡ್ಕರಿ ಹೇಳಿದ್ದಾರೆ.

click me!