'ಮಾಜಿ ಪ್ರಧಾನಿ ಮೊರಾರ್ಜಿ ಗೋಮೂತ್ರ ಸೇವಿಸ್ತಿದ್ದರು'

By Web DeskFirst Published Sep 9, 2019, 8:50 AM IST
Highlights

ಔಷಧ ತಯಾರಿಕೆಯಲ್ಲಿ ಗೋ ಮೂತ್ರವನ್ನು ಬಳಸಿಕೊಳ್ಳುವ ಕುರಿತಾಗಿ ಆಯುಷ್‌ ಸಚಿವಾಲಯ ಗಂಭೀರ ಚಿಂತನೆ| ಮಾಜಿ ಪ್ರಧಾನಿ ಮೊರಾರ್ಜಿ ಗೋಮೂತ್ರ ಸೇವಿಸ್ತಿದ್ದರು| 

ಪಟನಾ[ಸೆ.09]: ಔಷಧೀಯ ಅಂಶ ಹೊಂದಿರುವ ಗೋ ಮೂತ್ರವನ್ನು ಮಾಜಿ ಪ್ರಧಾನಿ ದಿ.ಮೊರಾರ್ಜಿ ದೇಸಾಯಿ ಅವರು ಸೇವಿಸುತ್ತಿದ್ದರು ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್‌ ಚೌಬೆ ತಿಳಿಸಿದ್ದಾರೆ. ಅಲ್ಲದೇ, ಕ್ಯಾನ್ಸರ್‌ ಗುಣಪಡಿಸಬಲ್ಲ ಔಷಧ ತಯಾರಿಕೆಯಲ್ಲಿ ಗೋ ಮೂತ್ರವನ್ನು ಬಳಸಿಕೊಳ್ಳುವ ಕುರಿತಾಗಿ ಆಯುಷ್‌ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಗೋ ಮೂತ್ರವು ಅಗಾಧ ಶಕ್ತಿ ಹೊಂದಿದೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಗುಣ ಇದರಲ್ಲಿದೆ. ಕ್ಯಾನ್ಸರ್‌ ಔಷಧಿಗಳಲ್ಲಿ ಗೋ ಮೂತ್ರವನ್ನು ಬಳಸಿಕೊಳ್ಳಲು ಇಲಾಖೆ ಕಾರ್ಯೋನ್ಮುಖವಾಗಿದೆ. ಗೋ ಮೂತ್ರದ ಔಷಧೀಯ ಗುಣದ ಮೇಲೆ ಸಂಶೋಧನೆ ಅಗತ್ಯವಾಗಿದೆ. ಹಲವಾರು ಜನರು ಈಗಲೂ ಅನಾರೋಗ್ಯಕ್ಕೆ ತುತ್ತಾದಾಗ ಗೋ ಮೂತ್ರ ಸೇವಿಸುತ್ತಾರೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೂ ಸ್ವತಃ ಇದನ್ನು ಬಳಸುತ್ತಿದ್ದರು ಎಂದಿದ್ದಾರೆ.

ದೇಶದಲ್ಲಿ ಕ್ಯಾನ್ಸರ್‌ ಮತ್ತು ಮಧುಮೇಹ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ದೇಶ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಈ ರೋಗ ಸವಾಲಾಗಿವೆ. ಇವನ್ನು ಶಾಶ್ವತವಾಗಿ ತೊಡೆದು ಹಾಕಲಾಗದಿದ್ದರೂ ನಿಯಂತ್ರಿಸಬಹುದಾಗಿದೆ. 2030 ರೊಳಗೆ ಭಾರತ ಸುಸ್ಥಿರ ಅಭಿವೃದ್ಧಿ ಗುರಿ ಮುಟ್ಟಲಿದೆ ಎಂದು ಅಶ್ವಿನಿಕುಮಾರ್‌ ಚೌಭೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

click me!