
ಬೆಂಗಳೂರು (ಮಾ.15): ಹೊಸ ವರ್ಷಚಾರಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಯಾರು ಮರೆತಿಲ್ಲ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಹಾಗು ಮಹಿಳೆಯರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಏಷಿಯಾನೆಟ್ ನ್ಯೂಸೇಬಲ್ ಹಾಗು ಸುವರ್ಣ ನ್ಯೂಸ್ ವತಿಯಿಂದ ಪಿಂಕ್ ಸಮಾರಿಟನ್ ಎಂಬ ಮೊಬೈಲ್ ಆ್ಯಪನ್ನು ಇಂದು ಬಿಡುಗಡೆ ಮಾಡಲಾಯಿತು.
ಆ್ಯಪನ್ನು ಹೆಸರು 'ಪಿಂಕ್ ಸಮಾರಿಟನ್' ಎಂದು ಹೆಸರಿಸಲಾಗಿದ್ದು, ಮಹಿಳೆಯರು ತಮ್ಮನ್ನು ತಾವು ಸಂಕಷ್ಟದಲ್ಲಿ ಸಿಲುಕಿದಾಗ ಹೇಗೆ ರಕ್ಷಣೆಗೆ ಈ ಆ್ಯಪ್ ಸಹಕಾರಿಯಾಗಲಿದೆ. ಮಹಿಳೆಯರಿಗೆ ಕಷ್ಟ ಎದುರಾದಾಗ ಒಂದು ಬಟನ್ ಒತ್ತುವುದರಿಂದ ತಾವು ತಮ್ಮನ್ನು ಕಷ್ಟದಿಂದ ಪಾರು ಮಾಡಿಕೊಳ್ಳಬಹುದು. ತಾವು ಸಂಕಷ್ಟದಲ್ಲಿ ಸಿಲುಕಿದಾಗ ಬರಿ SoS ಬಟನ್ ಒತ್ತಿದಾಗ, ಹತ್ತಿರದಲ್ಲಿ ಈ ಆ್ಯಪ್ ಬಳಸುತ್ತಿರುವವರಿಗೆ ಕಷ್ಟದಲ್ಲಿರುವ ಸೂಚನೆಯನ್ನು ನೀಡುತ್ತದೆ. ವಿಶೇಷ ಅಂದ್ರೆ ಈ ಆ್ಯಪ್ ಬರಿ ಮಹಿಳೆರು ಅಷ್ಟೆ ಅಲ್ಲದೆ ಪುರುಷರು ಕೂಡ ಬಳಸಬಹುದು.
ಈ ಆ್ಯಪ್'ನಲ್ಲಿ ಮಹಿಳೆಯರಿಗೆ ಸಹಾಯವಾಗುವಂತೆ ಹತ್ತಿರದಲ್ಲಿರುವ ಪೊಲೀಸ್ ಠಾಣೆಯ ಹಾಗೂ ಫಾರ್ಮಸಿ ಕುರಿತು ಮಾಹಿತಿ ಲಭ್ಯವಿದೆಯಲ್ಲದೇ, ಸ್ವರಕ್ಷಣೆಗೆ ಬೇಕಾದ ವಸ್ತುಗಳನ್ನು ಆನ್'ಲೈನ್ ಖರೀದಿಸುವ ವ್ಯವಸ್ಥೆಯೂ ಲಭ್ಯವಿದೆ.
ಒಟ್ಟಾರೆ ಮಹಿಳೆಯರ ಸಂರಕ್ಷಣೆಗಾಗಿ ಯಾವಾಗಲೂ ಸರ್ಕಾರವನ್ನು ಅವಲಂಬಿಸುವುದರ ಬದಲು ಸ್ವಂತವಾಗಿ ಕಾಪಾಡಿಕೊಳ್ಳಲು ಪರಿಚಯಿಸಿರುವ ಈ ಆ್ಯಪ್'ನಿಂದ ಮಹಿಳೆಯರಿಗೆ ನಿಜಕ್ಕೂ ಸಹಾಯವಾಗಲಿದೆ. ಅ್ಯಂಡ್ರಾಯಿಡ್ ಫೋನ್'ಗಳಿಗೆ ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್'ನಲ್ಲಿ ಉಚಿತವಾಗಿ ಲಭ್ಯವಿದೆ.
ಫೇಸ್'ಬುಕ್'ನಲ್ಲಿ ಪಿಂಕ್ ಸಮಾರಿಟನ್ ಪೇಜನ್ನು ಲೈಕ್ ಮಾಡಲು ಈ ಕೊಂಡಿಯನ್ನು https://www.facebook.com/pinksamaritan/ ಕ್ಲಿಕ್ಕಿಸಿ.
ವರದಿ: ಪ್ರಿಯಾಂಕ ತಳವಾರ ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.