
ಜೆರುಸಲೇಂ(ಏ.11): ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಇಸ್ರೇಲ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜಯಭೇರಿ ಭಾರಿಸಿದ್ದಾರೆ.
ನೆತನ್ಯಾಹು ದಾಖಲೆಯ ಸತತ 5ನೇ ಬಾರಿಗೆ ಅಧಿಕಾರದ ಗದ್ದುಗೆ ಏರಲಿದ್ದು, ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಬೆನ್ನಿ ಗ್ಯಾಂಟ್ಸ್ ಸೋಲೋಪ್ಪಿಕೊಂಡಿದ್ದಾರೆ.
120 ಸದಸ್ಯ ಬಲವುಳ್ಳ ಸದನದಲ್ಲಿ 65 ಸದಸ್ಯ ಬಲದ ಬೆಂಬಲದೊಂದಿಗೆ ನೆತನ್ಯಾಹು ಅಧಿಕಾರದ ಗದ್ದುಗೆ ಏರಲಿದ್ದಾರೆ. ನೆತನ್ಯಾಹು ಅವರಿಗೆ ಬಲಪಂಥೀಯ ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗಲಿದೆ.
ಇನ್ನು ಇಸ್ರೇಲ್ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತ್ಯೇಕ ಪ್ಯಾಲೆಸ್ತೇನ್ ಪರ ಸಂಘಟನೆ ಹಮಾಸ್, ನೆತನ್ಯಾಹು ಆಯ್ಕೆಯನ್ನು ಅಸಂಬದ್ಧ ಎಂದು ಹೇಳಿದೆ.
ಇಸ್ರೇಲ್‌ನಲ್ಲಿ ಶಾಂತಿ ಮಾತುಕತೆಯಲ್ಲಿ ನಂಬಿಕೆ ಇರದ ಯಾವುದೇ ಪಕ್ಷ ಅಧಿಕಾರ ರಚನೆ ಮಾಡಿದರೂ ಅದು ಹಾಲಿ ಪರಿಸ್ಥಿತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹಮಾಸ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.