
ಬೆಂಗಳೂರು[ಮೇ.11]: ಹಿಂದೂ ಮುಸ್ಲಿಂ ಎಂಬ ವಿಚಾರವಾಗಿ ಕೋಮು ಗಲಭೆಗಳು ನಡೆಯುತ್ತಿರುವ ಬೆನ್ನಲ್ಲೇ ಇಲ್ಲೊಬ್ಬ ಮುಸ್ಲಿಂ ಯುವಕ ರಾಮನ ಸೇವೆ ಮಾಡಿ ಸಾಮರಸ್ಯ ಮೆರೆಯುತ್ತಿದ್ದಾನೆ. ಈತನ ಕಾಯಕ ನೋಡಿದವರೆಲ್ಲರೂ ಆತನನ್ನು ಕೊಂಡಾಡುತ್ತಿದ್ದಾರೆ. ಹೌದು ಬೆಂಗಳೂರಿನ ರಾಜಾಜಿನಗರದಲ್ಲಿರುವ ರಾಮ ಮಂದಿರವನ್ನು ಮುಸ್ಲಿಂ ಯುವಕನೊಬ್ಬ ಸ್ವಚ್ಛಗೊಳಿಸುತ್ತಾನೆ. ಈ ದೇವಸ್ಥಾನದ ಸ್ವಚ್ಛತೆಯ ಜವಾಬ್ದಾರಿ ಸದ್ಧಾಂ ಹುಸೈನ್ ಗೆ ವಹಿಸಲಾಗಿದೆ. ಸುದ್ದಿ ಸಂಸ್ಥೆ ANI ತನ್ನ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದೆ.
ರಾಮ ನವಮಿಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಿಟ್ಟಿನಲ್ಲಿ ಸದ್ದಾಂ ಹುಸೈನ್ ದೇವಸ್ಥಾನದ ಸ್ವಚ್ಛತೆ ಹಾಗೂ ಸಿಂಗಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೆಲಸದ ಬಗ್ಗೆ ಅನುಭವ ಹಂಚಿಕೊಂಡಿರುವ ಸದ್ದಾಂ ಹುಸೈನ್ 'ನನಗೆ ದೇವಸ್ಥಾನವನ್ನು ಸ್ವಚ್ಛಗೊಳಿಸುವುದರಿಂದ ಖುಷಿಯಾಗುತ್ತದೆ. ನನ್ನ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಕಳೆದ 2-3 ವರ್ಷಗಳಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ' ಎಂದಿದ್ದಾರೆ.
ಟ್ವಿಟರ್ ನಲ್ಲಿ ಈ ಟ್ವೀಟ್ ಬಹಳಷ್ಟು ವೈರಲ್ ಆಗುತ್ತಿದ್ದು, ಈವರೆಗೂ ಇದನ್ನು ಸುಮರು 5 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 1 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ. ಬಳಕೆದಾರನೊಬ್ಬ ಸದ್ದಾಂಗೆ ಪ್ರಶಂಸೆ ವ್ಯಕ್ತಪಡಿಸುತ್ತಾ 'ಈತ ನಿಜವಾದ ಭಾರತೀಯ. ಓರ್ವ ಉತ್ತಮ ವ್ಯಕ್ತಿ ತನ್ನ ರಾಷ್ಟ್ರ, ಕುಟುಂಬ ಹಾಗೂ ಸಮಾಜದ ಸೇವೆ ಮಾಡುವುದರೊಂದಿಗೆ ಪ್ರೀತಿ, ಮಾನವೀಯತೆ ಹಗೂ ಸಾಮರಸ್ಯವನ್ನೂ ಹರಡುತ್ತಾನೆ' ಎಂದು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.