
ಬೆಂಗಳೂರು(ಅ. 26): ರಾಜ್ಯಕ್ಕೆ ಮೊತ್ತಮೊದಲ ಮಹಿಳಾ ಡಿಜಿ ಐಜಿಪಿ ನೇಮಕ ಬಹುತೇಕ ಖಚಿತಗೊಂಡಿದೆ. ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ಎನ್.ರಾಜು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡಲು ರಾಜ್ಯ ಸರ್ಕಾರ ಮನಸ್ಸು ಮಾಡಿದೆ. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಜಿ ಐಜಿಪಿ ಹುದ್ದೆಗೆ ಮಹಿಳೆಯೊಬ್ಬರು ನೇಮಕಗೊಳ್ಳಲಿದ್ದಾರೆ. ರಾಜ್ಯದಲ್ಲಿರುವ ಐಪಿಎಸ್ ಅಧಿಕಾರಿಗಳಲ್ಲಿ ಸೇವಾ ಜೇಷ್ಠತೆಯಲ್ಲಿ ಮೊದಲ ಸ್ಥಾನದಲ್ಲಿರುವ ನೀಲಮಣಿ ಅವರು ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆ ಅಲಂಕರಿಸಲಿದ್ದಾರೆ. ಆಗಿರುವ ಡಿಜಿ-ಐಜಿಪಿ ಆರ್.ಕೆ.ದತ್ತಾ ಅವರು ಅ.31ರಂದು ನಿವೃತ್ತರಾಗಲಿದ್ದಾರೆ. ಅದಾದ ಬಳಿಕ ನೂತನ ಪೊಲೀಸ್ ಮಹಾನಿರ್ದೇಶಕರು ಅಧಿಕಾರ ಸ್ವೀಕರಿಸಲಿದ್ದಾರೆ.
1983ರ ಬ್ಯಾಚ್'ನ ಐಪಿಎಸ್ ಆಧಿಕಾರಿಯಾಗಿರುವ ನೀಲಮಣಿ ಅವರು ಉ್ತತರ ಪ್ರದೇಶದ ರೂರ್ಕೀಯವರು. ಎಂಎ, ಎಂಫಿಲ್, ಎಂಬಿಎ ಪದವಿಗಳನ್ನೂ ಪಡೆದಿದ್ದಾರೆ. ಇನ್ನು, 1984ರ ಬ್ಯಾಚ್'ನ ಎಂ.ಎನ್.ರೆಡ್ಡಿ ಹಾಗೂ ಕಿಶೋರ್ ಚಂದ್ರ ಕೂಡ ಡಿಜಿ/ಐಜಿಪಿ ಹುದ್ದೆಯ ರೇಸ್'ನಲ್ಲಿದ್ದಾರೆ.
ಸದ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿರೋ ನೀಲಮಣಿ ಎನ್. ರಾಜು ಅವರು ಡೊಂಟ್'ಕೇರ್ ನಡವಳಿಕೆಯಿಂದಲೇ ಹೆಸರಾದವರು. 1993ರಿಂದ 1996ರವರೆಗೂ ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ರಾಜು ಅವರು ದಕ್ಷ ಅಧಿಕಾರಿ ಎಂದೇ ಫೇಮಸ್. ಮೂಲಗಳ ಪ್ರಕಾರ, ನೀಲಮಣಿಯವರನ್ನು ಪೊಲೀಸ್ ಮಹಾನಿರ್ದೇಶಕರನ್ನಾಗಿ ಮಾಡುವುದೆಂದರೆ ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡಂತಹ ಭಯ ಸರಕಾರಕ್ಕಿತ್ತು. ಆದರೆ, ಕೆಲ ಷರತ್ತುಗಳನ್ನಿಟ್ಟು ನೀಲಮಣಿಯವರಿಗೆ ಡಿಜಿ-ಐಜಿಪಿ ಹುದ್ದೆ ಕೊಡಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.