ರಾಷ್ಟ್ರಪತಿ ಭಾಷಣದಲ್ಲಿ ದೇವೇಗೌಡರ ಹೆಸರೇ ಇಲ್ಲ!

Published : Oct 25, 2017, 10:30 PM ISTUpdated : Apr 11, 2018, 12:40 PM IST
ರಾಷ್ಟ್ರಪತಿ  ಭಾಷಣದಲ್ಲಿ ದೇವೇಗೌಡರ ಹೆಸರೇ ಇಲ್ಲ!

ಸಾರಾಂಶ

ಸರ್ಕಾರ ರಾಷ್ಟ್ರಪತಿಗಳ ಭಾಷಣದ ಹೆಸರಲ್ಲಿ ವಿಪಕ್ಷಗಳಿಗೆ ಅವಮಾನ ಮಾಡಿದೆ ಅಂತಾ ವಿರೋಧ  ಪಕ್ಷಗಳು  ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಬೆಂಗಳೂರು (ಅ.25): ಸರ್ಕಾರ ರಾಷ್ಟ್ರಪತಿಗಳ ಭಾಷಣದ ಹೆಸರಲ್ಲಿ ವಿಪಕ್ಷಗಳಿಗೆ ಅವಮಾನ ಮಾಡಿದೆ ಅಂತಾ ವಿರೋಧ  ಪಕ್ಷಗಳು  ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ವಜ್ರಮಹೋತ್ಸದ  ಅದ್ವಾನಗಳನ್ನು ಹೇಳುತ್ತಾ  ಹೋದರೆ  ಮುಗಿಯೋದೇ ಇಲ್ಲ  ಅನ್ಸುತ್ತೆ.  ಒಂದೆಡೆ, ಟಿಪ್ಪು ಹೆಸರು ಸೇರಿಸಿದ್ದು ಬಿಜೆಪಿಗರನ್ನ ಕೆರಳಿಸಿದರೆ,  ಮತ್ತೊಂದೆಡೆ ರಾಷ್ಟ್ರಪತಿಗಳ ಭಾಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಿಂದಿನ ಅನೇಕ ಮುಖ್ಯಮಂತ್ರಿಗಳ ಹೆಸರೇ ಇರಲಿಲ್ಲ. ಆದರೆ  ರಾಷ್ಟ್ರಪತಿಗಳೇ ದೇವೇಗೌಡರ ಹೆಸರು ಪ್ರಸ್ತಾಪಿಸಿ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ದೇವೇಗೌಡರು ನನಗೆ ಆತ್ಮೀಯ ಮಿತ್ರರು. ನಾನು ಇಲ್ಲಿ ಕೆಲವರ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ ಎಂದು ನಗುತ್ತಲೇ ಉತ್ತರಿಸಿದರು.

ಇದಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು,  ಇದು ಸಣ್ಣ ವಿಷಯ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರೈತನ ಮಗನಾಗಿ ಹುಟ್ಟಿ ರೈತನ ಮಗನಾಗಿ ಸಾಯುತ್ತೇನೆ.ಮಾಜಿ ಪ್ರಧಾನಿ ಎಂಬ ಕಿರೀಟ ಬೇಕಾಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ,  ಹತ್ತಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತೆ ಆಗಬೇಕಿದ್ದ ವಜ್ರಮಹೋತ್ಸವ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್