
ಮುಂಬೈ(ನ.04): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ-ಶಿವಸೇನೆ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಎರಡೂ ಪಕ್ಷಗಳು ತಮ್ಮ ಹಠ ಬಿಡಲು ತಯಾರಿಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಂಗಟ್ಟುಗೊಳಿಸಿದೆ.
ರಾಜಕಾರಣಕ್ಕೆ ‘ಮಹಾ’ ಟ್ವಿಸ್ಟ್ : ಪ್ರತ್ಯೇಕವಾಗಿ ಗವರ್ನರ್ ಭೇಟಿ ಮಾಡಿದ ಸೇನೆ, BJP
ಈ ಮಧ್ಯೆ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ನಡುವೆ ಮೈತ್ರಿಯಾಗುವ ಸಾಧ್ಯತೆ ಕುರಿತು ಚರ್ಚೆ ಜೋರಾಗಿದ್ದು, ಉಭಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮಿಸಿದರೆ ಮೈತ್ರಿ ರಚನೆಯಾದರೆ ಆಶ್ಚರ್ಯಪಡಬೇಕಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ
ಒಂದು ವೇಳೆ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಇಂದು ಜೀವಂತವಾಗಿದ್ದರೆ, ಸರ್ಕಾರ ರಚನೆಯಲ್ಲಿ ಬಿಜೆಪಿಗೆ ಇಷ್ಟೊಂದು ಆಟವಾಡಲು ಧೈರ್ಯವೇ ಇರುತ್ತಿರಲಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶಾರದ್ ಪವಾರ್ ಸಂಬಂಧಿ ರೋಹಿತ್ ರಾಜೇಂದ್ರ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ರಚೆನೆಯಲ್ಲಿ ವಿಳಂಬ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಕಾರಣವಾಗಿದೆ ಎಂದು ರೋಹಿತ್ ಪವಾರ್ ಆರೋಪಿಸಿದ್ದು, ಬಾಳಾ ಸಾಹೇಬ್ ಜೀವಂತವಾಗಿದ್ದರೆ ಈ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು, ಅದ್ಯಾವಾಗ ಸರ್ಕಾರ ರಚನೆಯಾಗುತ್ತೋ ಗೊತ್ತಿಲ್ಲ
ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!
ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಹಲವು ಧೀಮಂತ ನಾಯಕರು ಮಿಂಚಿ ಕಣ್ಮರೆಯಾಗಿದ್ದು, ಅಂತಹವರ ಪೈಕಿ ಬಾಳಾ ಸಾಹೇಬ್ ಪ್ರಮುಖರು ಎಂದು ರೋಹಿತ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಸರ್ಕಾರ ರಚನೆಯ ಹಂತದಲ್ಲೇ ಇಷ್ಟೊಂದು ಕಚ್ಚಾಡುತ್ತಿರುವ ಶಿವಸೇನೆ-ಬಿಜೆಪಿ ಮೈತ್ರಿಕೂಟ ಐದು ವರ್ಷಗಳ ಕಾಲ ಸದೃಢ ಆಡಳಿತ ನೀಡಲಿದೆಯಾ ಎಂಬ ಕುರಿತು ಅನುಮಾನಗಳಿವೆ ಎಂದು ರೋಹಿತ್ ಹೇಳಿದ್ದಾರೆ.
ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಬಿಜೆಪಿ ನಾಯಕನ ಹೊಸ ವರಾತ!
ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?
ಶಿವಸೇನೆ-ಎನ್‌ಸಿಪಿ ನಡುವಿನ ಮೈತ್ರಿ ಸಾಧ್ಯತೆ ಮಹಾರಾಷ್ಟ್ರದಲ್ಲಿ ಹೊಸದೊಂದು ಅಧ್ಯಾಯ ತೆರೆಯಲಿದ್ದು, ಪ್ರಾದೇಶಿಕ ಶತ್ರುಗಳ ನಡುವಿನ ಮಿತೃತ್ವ ರೋಚಕವಾಗಿರಲಿದೆ ಎಂದು ರಾಜಕೀಯ ವತಜ್ಞರು ವಿಶ್ಲೇಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.