
ನವದೆಹಲಿ: ೨೦೦೮ರಲ್ಲಿ ನಿಂತು ಹೋಗಿದ್ದ ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಮತ್ತೆ ಪ್ರಕಟಗೊಳ್ಳಲಿದ್ದು, ಹಿರಿಯ ಪತ್ರಕರ್ತ ನೀಲಭ್ ಮಿಶ್ರಾ ಇದರ ಪ್ರಧಾನ ಸಂಪಾದಕರಾಗಲಿದ್ದಾರೆ. ಇದಕ್ಕೂ ಮೊದಲು ಅವರು ‘ಔಟ್‌ಲುಕ್’ ನಿಯತಕಾಲಿಕದ ಹಿಂದಿ ಆವೃತ್ತಿಯ ಸಂಪಾದಕರಾಗಿದ್ದರು ಎಂದು ಎಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮೋತಿಲಾಲ್ ವೋಹ್ರಾ ತಿಳಿಸಿದ್ದಾರೆ. ಮಿಶ್ರಾ ಹಿಂದಿ, ಇಂಗ್ಲಿಷ್ ಮತ್ತು ಅವುಗಳ ಡಿಜಿಟಲ್ ಆವೃತ್ತಿಗಳಿಗೆ ಪ್ರಧಾನ ಸಂಪಾದಕರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಪತ್ರಿಕೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಈ ವರ್ಷದ ಜನವರಿಯಲ್ಲಿ ಲಖನೌದಲ್ಲಿ ನಡೆದಿದ್ದ ವಿಶೇಷ ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಬಿಜೆಪಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಎಜೆಎಲ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೋರ್ಟಲ್ಲಿ ಕಾನೂನು ಸಮರ ನಡೆಸುತ್ತಿದ್ದಾರೆ.
(ಕೃಪೆ: ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.