
ನವದೆಹಲಿ(ಸೆ.01): ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಆಶಾವಾದವೊಂದು ಮೂಡಿದೆ. ಮೂರು ರಾಜ್ಯಗಳ ನಡುವೆ ಇರುವ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಮಹದಾಯಿ ನ್ಯಾಯಾಧಿಕರಣ ಮುನ್ನುಡಿ ಬರೆದಿದೆ. ಮಹದಾಯಿ ನ್ಯಾಯಾಧಿಕಾರಣ ಸೂಚಿಸಿದ ಮಾತುಕತೆಯ ದಾರಿಯನ್ನು ಸಿಎಂ ಸಿದ್ಧರಾಮಯ್ಯ ಸ್ವಾಗತಿಸಿದ್ದಾರೆ.
ಸಿಎಂಗಳ ಸಭೆ ನಡೆಸಿ ಒಮ್ಮತಕ್ಕೆ ಬರಲು ನ್ಯಾಯಾಧಿಕರಣ ಸೂಚನೆ: ಮಹದಾಯಿ ನದಿ ನೀರಿನ ಹಂಚಿಕೆಯನ್ನು ಬಗೆಹರಿಸಲು ಮಾತುಕತೆಯೇ ಸೂಕ್ತ ಎಂದು ನ್ಯಾಯಾಧಿಕರಣ ಸೂಚಿಸಿದೆ. ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳು ಒಟ್ಟಿಗೆ ಕುಳಿತು ಪ್ರಯತ್ನಿಸಬೇಕೆಂದು ಮಹದಾಯಿ ನ್ಯಾಯಾಧಿಕಾರಣ ಹೇಳಿದೆ. ಇದಕ್ಕೆ ಮೂರು ರಾಜ್ಯಗಳೂ ಸಮ್ಮತಿಸಿವೆ.
ಇಂದು ಮಹದಾಯಿ ನ್ಯಾಯಾಧಿಕರಣದಲ್ಲಿ ಸಾಕ್ಷ್ಯಗಳ ಪರಿಶೀಲನೆ ವೇಳೆ ಮೂರು ರಾಜ್ಯಗಳು ಪರಸ್ಪರ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ನ್ಯಾಯಮೂರ್ತಿ ಜೆಎಸ್ ಪಾಂಚಾಲ್ ಹೇಳಿದ್ದಾರೆ. ಈ ಮಾತಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಪರ ವಕೀಲರು ಸಮ್ಮತಿ ಸೂಚಿಸಿದ್ದಾರೆ. ಈ ಬೆಳವಣಿಗೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಈ ಮೂಲಕ ಕಳೆದ 3 ದಶಕಗಳಿಂದ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವ ಮಲಪ್ರಭಾ ಕಣಿವೆಯ ಜನರಿಗೆ ಹೊಸ ಆಶಾ ಕಿರಣವೊಂದು ಮತ್ತೊಮ್ಮೆ ಹುಟ್ಟಿಕೊಂಡಿದೆ.
- ದೆಹಲಿಯಿಂದ ಪ್ರಶಾಂತ್ ನಾಥು, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.