ಸರಕು ಸಾಗಣೆದಾರರು ಇನ್ನು ಪ್ರತಿ ರಾಜ್ಯದಲ್ಲೂ ಸುಂಕ ಕಟ್ಟಬೇಕಾಗಿಲ್ಲ, ಸಿಗುತ್ತೆ ಇ ಬಿಲ್

By Suvarna Web DeskFirst Published Jan 13, 2018, 1:10 PM IST
Highlights

ಜಿಎಸ್‌ಟಿ ಜಾರಿಯಿಂದ ದೇಶಾದ್ಯಂತ ಏಕ ರೂಪ ತೆರಿಗೆ ಕಾಯ್ದೆ ಜಾರಿಗೆ ಬಂದಿದ್ದು, ಸರಕು ಸಾಗಣೆದಾರರು ಪ್ರತಿ ರಾಜ್ಯ ಪ್ರವೇಶಿಸಿದಾಗಲೂ ಸುಂಕ ಕಟ್ಟೋದು ಇನ್ನು ಬೇಡ. ಒಂದೇ ಇ-ಬಿಲ್‌ನಿಂದ ಎಲ್ಲೆಡೆ ಸಂಚರಿಸಬಹುದು.

ಹೊಸದಿಲ್ಲಿ: ಸರಕು ಸಾಗಣೆ ಇನ್ನುಮುಂದೆ ಸುಲಭವಾಗಲಿದ್ದು, ಲಾರಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸುವಾಗ ಎಲ್ಲೆಡೆ ಸುಂಕ ಕಟ್ಟುವ ಅಗತ್ಯವಿರುವುದಿಲ್ಲ. ಫೆಬ್ರವರಿ 1ರಿಂದ ಜಾರಿಯಾಗುವಂತೆ ಆನ್‌ಲೈನ್ ಮೂಲಕವೇ ಸುಂಕ ಕಟ್ಟುವ ಅವಕಾಶವಿದ್ದು, ದೇಶಾದ್ಯಂತ ಮೌಲ್ಯವಿರುವ ಈ ಇ-ಬಿಲ್ ತೋರಿಸಿದರೆ ಸಾಕಾಗುತ್ತದೆ.

ಕಳೆದ ಜುಲೈ‌ನಲ್ಲಿ ಜಾರಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಿಂದ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ 10 ಕಿ.ಮೀ.ಗಿಂತಲೂ ಹೆಚ್ಚು ದೂರವಿದ್ದು, 50 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಸರಕು ಸಾಗಿಸಲು ಆನ್‌ಲೈನ್ ಮೂಲಕವೇ ಸುಂಕ ಕಟ್ಟಿ, ಇ-ಬಿಲ್ ಪಡೆಯುವುದು ಫೆಬ್ರವರಿ 1ರಿಂದ ಕಡ್ಡಾಯವಾಗಲಿದೆ.

'ತಮ್ಮದೇ ರೀತಿಯಲ್ಲಿ ತೆರಿಗೆ ಪಾವತಿಸುವವರು ಹಾಗೂ ಸರಕು ಸಾಗಣೆದಾರರು ಸುಂಕ ಕಟ್ಟಲು ಯಾವ ಕಚೇರಿಯನ್ನೂ ಅಲೆಯಬೇಕಾಗಿಲ್ಲ. ಬದಲಾಗಿ, ಆನ್‌ಲೈನ್ ಮೂಲಕವೇ ಕಟ್ಟಬಹುದು,' ಎಂದು ಜಿಎಸ್‌ಟಿಎನ್ ಸಿಇಒ ಪ್ರಕಾಶ್ ಕುಮಾರ್ ಹೇಳಿದ್ದಾರೆ.

ಮೊಬೈಲ್ ಆ್ಯಪ್, ಪೋರ್ಟಲ್ ಅಥವಾ ಎಸ್‌ಎಂಎಸ್‌ನಿಂದಲೂ ಈ ಇ-ಬಿಲ್ ಪಡೆಯಲು ಅವಕಾಶವಿರಲಿದೆ.

ಈ ವ್ಯವಸ್ಥೆ ಜಾರಿಗೊಳಿಸಲು ಜನವರಿ 31ರ ತನಕ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದು, ಇನ್ನು 15 ದಿವಸಗಳಲ್ಲಿ ಎಲ್ಲ ರಾಜ್ಯಗಳು ಈ ವ್ಯವಸ್ಥೆಗೆ ಸಜ್ಜಾಗಲು ಸಮಯಾವಕಾಶ ಇರಲಿದೆ.
 

click me!