ಸೌದಿ ಮಹಿಳೆಯರಿಗೆ ಪುರುಷರ ಫುಟ್‌ಬಾಲ್ ಪಂದ್ಯ ನೋಡುವ ಸ್ವಾತಂತ್ರ್ಯ

By Suvarna Web DeskFirst Published Jan 13, 2018, 12:14 PM IST
Highlights

ಪುರುಷರ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಸೌದಿ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ಅವಕಾಶ ನೀಡಿದ್ದು, ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಪಂದ್ಯ ವೀಕ್ಷಿಸಿದವರು ಫುಲ್ ಖುಷಿಯಾಗಿದ್ದಾರೆ.

ರಿಯಾದ್: ಮಹಿಳೆಯರಿಗೆ ಸಿಕ್ಕಾಪಟ್ಟೆ ನಿರ್ಬಂಧವಿರುವ ಸೌದಿ ಅರೇಬಿಯಾದಲ್ಲಿ ಇತ್ತೀಚೆಗೆ ಸರಕಾರ ಚಾಲನಾ ಪರವಾನಗಿ ನೀಡಿದೆ. ಹೆಣ್ಣು ಮಕ್ಕಳಿಗೆ ಸಿಗುತ್ತಿರುವ ಸ್ವಾತಂತ್ರ್ಯದ ಬಗ್ಗೆ ಸಂತೋಷದಿಂದ ಇದ್ದ ಮಹಿಳೆಯರಿಗೆ ಮತ್ತೊಂದು ನಿರ್ಬಂಧವನ್ನು ಸಡಿಸಲಾಗಿದ್ದು, ಫುಟ್‌ಬಾಲ್ ಪಂದ್ಯವನ್ನು ನೀಡುವ ಅವಕಾಶ ನೀಡಲಾಗಿದೆ. ಆ ಮೂಲಕ ಕ್ಲಿಷ್ಟ ನಿರ್ಬಂಧಗಳನ್ನು ಈ ದೇಶದಲ್ಲಿ ಸಡಿಸಲಾಗುತ್ತಿದೆ.

ಪತಿ, ಮಕ್ಕಳೊಂದಿಗೆ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಿದ ಮಹಿಳೆಯರು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು, ಆಲ್ ಅಹ್ಲಿ ಮತ್ತು ಆಲ್ ಬಾಟಿನ್ ನಡುವೆ ನಡೆದ ಪಂದ್ಯಕ್ಕೆ ಸಾಕ್ಷಿಯಾಗಿ, ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ಅನುಭವಿಸಿದರು.

ಜಿಡ್ಡಾ ಕ್ರೀಡಾಂಗಣದಲ್ಲಿ2018ರಲ್ಲಿ ಆರಂಭವಾಗುವ ಪಂದ್ಯಕ್ಕೆ ಕುಟುಂಬದ ಸದಸ್ಯರೊಂದಿಗೆ ಪಂದ್ಯ ವೀಕ್ಷಿಸಲು ಮಹಿಳೆಯರಿಗೂ ಅವಕಾಶ ಕಲ್ಪಿಸುವುದಾಗಿ, ಕ್ರೀಡಾ ಪ್ರಾಧಿಕಾರ ಕಳೆದ ಅಕ್ಟೋಬರ್‌ನಲ್ಲಿಯೇ ಘೋಷಿಸಿತ್ತು.

ಈ ಹಿಂದೆಯೇ ಈ ಸ್ವಾತಂತ್ರ್ಯವನ್ನು ನಮಗೆ ನೀಡಬೇಕಾಗಿತ್ತು. ಈಗಲಾದಲೂ ಈ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇನ್ನು ಮುಂದೆ ಸಡಿಲಿಸಿರುವ ನಿರ್ಬಂಧಗಳೂ ಮತ್ತಷ್ಟು ಖುಷಿ ನೀಡಲಿದೆ, ಎನ್ನುವ ವಿಶ್ವಾಸವನ್ನು ಪಂದ್ಯ ವೀಕ್ಷಿಸಿದ ಮಹಿಳೆಯೊಬ್ಬರು ಹೇಳಿದ್ದಾರೆಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಇದುವರೆಗೂ ಈ ರಾಜ್ಯದ ಶೇ.13ರಷ್ಟು ಮಹಿಳೆಯರು ಮಾತ್ರ ಕಸರತ್ತು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂಖ್ಯೆಯನ್ನು 2030ರೊಳಗೆ ಶೇ.40 ಕ್ಕೆ ಮುಟ್ಟಿಸುವ ಗುರಿ ಕ್ರೀಡಾ ಪ್ರಾಧಿಕಾರಕ್ಕಿದೆ.
 

click me!