ಸಿದ್ದು ತಮ್ಮ ಕಾಲು ಭದ್ರವಾಗಿ ಇಟ್ಟುಕೊಳ್ಳಲಿ: ಸಚಿವ ಸಿ.ಟಿ.ರವಿ

Published : Aug 29, 2019, 08:58 AM IST
ಸಿದ್ದು ತಮ್ಮ ಕಾಲು ಭದ್ರವಾಗಿ ಇಟ್ಟುಕೊಳ್ಳಲಿ: ಸಚಿವ ಸಿ.ಟಿ.ರವಿ

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಕಾಲು ಎಳೆಯುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅವರ ಕಾಲು ಭದ್ರವಾಗಿ ಇರಿಸಿಕೊಳ್ಳಲಿ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಬೆಂಗಳೂರು [ಆ.29]: ಕಾಂಗ್ರೆಸ್‌ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಎಳೆಯುವವರ ಸಂಖ್ಯೆ ಹೆಚ್ಚಾಗಿದ್ದು, ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ಸಿದ್ದರಾಮಯ್ಯ ನೋಡಿಕೊಳ್ಳಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಇನ್ನೂ ಸರ್ಕಾರ ಟೇಕಾಫ್‌ ಆಗಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಶ್ನಾತೀತ ನಾಯಕ ಎಂದು ಭಾವಿಸಿದ್ದೆವು. ಆದರೆ ಇನ್ನೂ ಕೂಡ ಕಾಂಗ್ರೆಸ್‌ನಲ್ಲಿ ವಿಪಕ್ಷ ನಾಯಕ ಯಾರು ಎಂಬುದೇ ನಿರ್ಧಾರವಾಗಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ನೋಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಟಾಚಾರಕ್ಕೆ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಮುಖ್ಯಮಂತ್ರಿಗಳಿದ್ದ ಹೆಲಿಕಾಪ್ಟರ್‌ ಇಳಿಯಲು ವಿಳಂಬ ಆಯಿತು. ಅನ್ನ ಬೆಂದಿದೆಯೇ ಎಂದು ತಿಳಿಯಲು ಎಲ್ಲ ಅಕ್ಕಿ ನೋಡಬೇಕಿಲ್ಲ. ಇನ್ನು ನಾಲ್ಕೈದು ಗ್ರಾಮಕ್ಕೆ ಹೋಗಬೇಕಿತ್ತು. ಸಮಯದ ಅಭಾವದಿಂದಾಗಿ ಹೋಗಲು ಸಾಧ್ಯವಾಗಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ECI; ಚುನಾವಣಾ ಆಯೋಗದ ವಿವಾದದ ನಡುವೆ ವೈರಲ್ ಆದ ಸಿಇಸಿ ಜ್ಞಾನೇಶಕುಮಾರ್‌ ಫ್ಯಾಮಿಲಿ ಟ್ರೀ ಪೋಸ್ಟರ್!
ಗ್ಯಾಂಗ್‌ಸ್ಟರ್‌ನ ವರಿಸಲು ಕಾಂಬೋಡಿಯಾದಿಂದ ಬಂದ 4 ಮಕ್ಕಳ ತಾಯಿ, ಮದುವೆಗೆ ಸಿಕ್ತು 12 ಗಂಟೆ ಪೆರೋಲ್‌; ಹನಿಮೂನ್‌ಗೆ ಎಷ್ಟು ಟೈಮ್‌ ಕೊಡ್ತೀರಿ ಎಂದ ನೆಟ್ಟಿಗರು!