ಪಾಕಿಸ್ತಾನದ ಸಿಂಧ್ ಪೊಲೀಸ್ ಇಲಾಖೆಗೆ ಹಿಂದೂ ಸಿಂಹಿಣಿ!

Published : Sep 05, 2019, 03:08 PM IST
ಪಾಕಿಸ್ತಾನದ ಸಿಂಧ್ ಪೊಲೀಸ್ ಇಲಾಖೆಗೆ ಹಿಂದೂ ಸಿಂಹಿಣಿ!

ಸಾರಾಂಶ

ಪಾಕಿಸ್ತಾನದ ಸಿಂಧ್ ಪೊಲೀಸ್ ಇಲಾಖೆಗೆ ಹಿಂದೂ ಸಿಂಹಿಣಿ| ಸಿಂಧ್ ಪೊಲೀಸ್ ಇಲಾಖೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ| ಅಪರೂಪದ ಸಾಧನೆ ಮಾಡಿದ ಹಿಂದೂ ಸಮುದಾಯದ ಪುಷ್ಪಾ ಕೋಲ್ಹಿ| ಪೊಲೀಸ್ ಇಲಾಖೆಯ ASI ಪರೀಕ್ಷೆಯಲ್ಲಿ ತೇರ್ಗಡೆಯಾದ ಪುಷ್ಪಾ| ತನ್ನ ಸಾಧನೆಯನ್ನು ಪೋಷಕರಿಗೆ ಅರ್ಪಿಸಿದ ಪುಷ್ಪಾ ಕೋಲ್ಹಿ|

ಕರಾಚಿ(ಸೆ.05): ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯ ನಡೆಯುವುದು ಸಾಮಾನ್ಯ. ಅದರಲ್ಲೂ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ ನಿತ್ಯ ನಿರಂತರ.

ಇಂತಹ ವಿಷಮ ಪರಿಸ್ಥಿತಿಯಲ್ಲೂ ಪಾಕಿಸ್ತಾನದ ಹಿಂದೂ ಸಮುದಾಯದ ಯುವಕ ಯುವತಿಯರು ಪರಿಶ್ರಮದ ಹಾದಿಯಲ್ಲಿ ಸಾಗುತ್ತಾ ಸಾಧನೆಯ ಶಿಖರವೇರುತ್ತಿದ್ದಾರೆ.

ಅದರಂತೆ ಪಾಕಿಸ್ತಾನದ ಪೊಲೀಸ್ ಇಲಾಖೆ ನಡೆಸಿದ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಹಿಂದೂ ಯುವತಿಯೋರ್ವಳು ಇತಿಹಾಸ ಬರೆದಿದ್ದಾಳೆ.

ಪಾಕ್’ನ ಸಿಂಧ್ ಪ್ರಾಂತ್ಯದ ಪುಷ್ಪಾ ಕೋಲ್ಹಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ASI ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಈ ಮೂಲಕ ಸಿಂಧ್ ಪೊಲೀಸ್ ಇಲಾಖೆಗೆ ಆಯ್ಕೆಯಾದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುಷ್ಪಾ, ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುವ ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಿ ಪೊಲೀಸ್ ಇಲಾಖೆ ಸೇರಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿ ಪೋಷಕರು ನನ್ನ ಬೆನ್ನಿಗೆ ನಿಂತಿದ್ದು, ಅವರ ಆಶೀರ್ವಾದದಿಂದಲೇ ೀ ಹುದ್ದೇಗೇರಲು ಸಾಧ್ಯವಾಯಿತು ಎಂದು ಪುಷ್ಪಾ ಕೋಲ್ಹಿ ತಿಳಿಸಿದ್ದಾಳೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ  ಹಿಂದೂ ಸಮುದಾಯದ ಇತರ ಯುವತಿಯರಿಗೆ ಮಾದರಿಯಾಗಬೇಕು ಎಂಬುದು ತನ್ನ ಆಸೆ ಎನ್ನುತ್ತಾಳೆ ಪುಷ್ಪಾ ಕೋಲ್ಹಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ