
ನವದೆಹಲಿ: ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್‌ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ನವದೆಹಲಿಯ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಎಂಜಿನಿಯರಿಂಗ್ ಆ್ಯಂಡ್ ಬಯೋಟೆಕ್ನಾಲಜಿ (ಐಸಿಜಿಇಬಿ) ಸಂಸ್ಥೆಯ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಅಮುಕ್ಕರ ಚೂರಣಂ ಹಾಗೂ ನೀಲವೆಂಬು ಕುಡಿನೀರ್ ಎಂಬುವೇ ಈ 2 ಔಷಧಿಗಳು.
ಅಮುಕ್ಕರ ಚೂರಣಂ: ಅಮುಕ್ಕರ ಚೂರಣಂನಲ್ಲಿ ಅಶ್ವಗಂಧ ಇರುತ್ತದೆ. ಇದರಲ್ಲಿನ ಮುಖ್ಯ ಅಂಶವು ಚಿಕೂನ್‌ಗುನ್ಯಾ,ರಕ್ತ ಮತ್ತು ಮೆದುಳಿನ ನಡುವೆ ವೈರಸ್ ದಾಟುವುದನ್ನು ಇದು ಸಮರ್ಥವಾಗಿ ತಡೆಯಬಲ್ಲದು. ನೀಲವೆಂಬು ಕುಡಿನೀರ್: ಇದು ಚಿಕೂನ್‌ಗುನ್ಯಾ ವೈರಸ್ ಪ್ರವೇಶವನ್ನು ತಡೆಗಟ್ಟುತ್ತದೆ ಹಾಗೂ ಡೆಂಘೀ ವೈರಸ್‌ಗಳ ಪುನರವರ್ತನೆಯನ್ನು ನಿಲ್ಲಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.