
ನವದೆಹಲಿ: ಇದೇ ಅವಧಿಯಲ್ಲಿ ಲೋಕಸಭೆಗೆ ಚುನಾವಣೆ ನಡೆದರೆ ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಎರಡು ಮಾಧ್ಯಮ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಹೇಳಿವೆ. ಆದರೆ ಎನ್‌ಡಿಎ ಸಂಖ್ಯೆ ಕುಸಿತವಾದಂತೆ ಕಾಣುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಬಲವರ್ಧನೆಯಾದಂತೆ ತೋರುತ್ತಿದೆ. ಇದು ನರೇಂದ್ರ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಂತೆ ಕಾಣುತ್ತಿದೆ.
ಎಬಿಪಿ ನ್ಯೂಸ್: ಎಬಿಪಿ ನ್ಯೂಸ್ -ಲೋಕನೀತಿ-ಸಿಎಸ್‌ಡಿಎಸ್ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ ಎನ್’ಡಿಎ 301 ಸ್ಥಾನ ಗಳಿಸಲಿದೆ. ಇದೇ ಸಂಸ್ಥೆ 2017ರ ಮೇನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎಗೆ ೩೩೧ ಸ್ಥಾನ ಪ್ರಾಪ್ತಿಯಾಗಿದ್ದವು.
ಇನ್ನು ೨೦೧೪ರ ಮಹಾಚುನಾವಣೆಯಲ್ಲಿ ಎನ್ ಡಿಎ 336 ಸ್ಥಾನ ಗಳಿಸಿತ್ತು. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಎನ್‌ಡಿಎ ಬಲ ಕ್ಷೀಣಿಸಿರುವುದು ಗೊತ್ತಾಗುತ್ತದೆ. ಇನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಬಲವರ್ಧನೆಯಾಗುತ್ತಿದೆ. ಯುಪಿಎ 2014ರಲ್ಲಿ ಕೇವಲ 59ಸ್ಥಾನ ಗಳಿಸಿತ್ತು. ಈಗ ಅದರ ಬಲ 127ಕ್ಕೆ ವೃದ್ಧಿಯಾಗುತ್ತಿದೆ. ಇತರರು 2014 ರಲ್ಲಿ ಹೊಂದಿದ್ದ 148 ಸ್ಥಾನಗಳ ಪೈಕಿ 33ನ್ನು ಕಳೆದುಕೊಂಡು ಕೇವಲ 115ಕ್ಕೆ ತೃಪ್ತರಾಗಲಿದ್ದಾರೆ.
ಇಂಡಿಯಾ ಟುಡೇ: ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಈಗ ಚುನಾವಣೆ ನಡೆದರೆ ಎನ್‌ಡಿಎ 309, ಯುಪಿಎ 102 ಹಾಗೂ ಇತರರು 132 ಸ್ಥಾನ ಗೆಲ್ಲಲಿದ್ದಾರೆ. ಇನ್ನು ಶೇ.53 ಮಂದಿ ಮೋದಿ ಮುಂದಿನ ಪ್ರಧಾನಿಯಾಗಲಿ ಎಂದಿದ್ದರೆ, ಶೇ.22 ಮಂದಿ ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ. ಸ್ವಾತಂತ್ರ್ಯಾನಂತರ ಭಾರತ ಕಂಡ ಉತ್ತಮ ಪ್ರಧಾನಿ ಎಂದರೆ ಮೋದಿ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.