
ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಟೀಕಿಸುತ್ತಿರುವ ಮಾಯಾವತಿ ತನ್ನದೇ ಆದ ತೃತೀಯ ರಂಗವನ್ನು ಕಟ್ಟಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್, ಛತ್ತೀಸ್‌ಗಢದಲ್ಲಿ ಅಜಿತ್ ಜೋಗಿ, ಹರ್ಯಾಣದಲ್ಲಿ ಚೌಟಾಲಾ ಜೊತೆ ಪ್ರತ್ಯೇಕ ಮೈತ್ರಿ ಮಾಡಿಕೊಂಡಿರುವ ಮಾಯಾವತಿ ಒಂದು ವೇಳೆ ಮಹಾಗಠಬಂಧನ್ ಸೀಟು ಹಂಚಿಕೆ ವಿಫಲವಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಸೂಚನೆ ಕೊಡುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಮೇಠಿ ಹಾಗೂ ರಾಯಬರೇಲಿ (ರಾಹುಲ್ ಹಾಗೂ ಸೋನಿಯಾ ಕ್ಷೇತ್ರಗಳು) ಬಿಟ್ಟು ಬೇರೆ ಸೀಟು ಕೊಡೋದು ಬೇಡ ಎಂದು ಮಾಯಾವತಿ ಅಖಿಲೇಶ್ ಯಾದವ್‌ಗೆ ಹೇಳಿದ್ದು, ಬೆಹೆನ್‌ಜೀಯ ಕಾಂಗ್ರೆಸ್ ಮೇಲಿನ ದಿಢೀರ್ ಮುನಿಸಿಗೆ ಕಾರಣ ಗೊತ್ತಾಗುತ್ತಿಲ್ಲ.
ಮನೆ ಬಿಡೋಲ್ಲ ಹೋಗ್ರಿ
ಹಿಂದೆ ದಿಲ್ಲಿಯಲ್ಲಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರಾಗಿದ್ದ ಬ್ರಜೇಶ್ ಕಾಳಪ್ಪ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ಚೋಪ್ರಾ ಎಂಬಾತನಿಗೆ ಕರ್ನಾಟಕ ಭವನ ಡಬಲ್ ಬೆಡ್‌ರೂಮ್ ಮನೆ ನೀಡಿತ್ತು. ಆದರೆ ಈಗ 6 ತಿಂಗಳಿನಿಂದ ಮನೆ ಖಾಲಿ ಮಾಡಿ ಎಂದು ಬೆನ್ನು ಹತ್ತಿ, ಕೊನೆಗೆ ನೋಟಿಸ್ ನೀಡಿದರೂ ಚೋಪ್ರಾ ಮನೆ ಖಾಲಿ ಮಾಡೋದಿಲ್ಲ, ನಿಮಗೆ ಏನೂ ಮಾಡ್ಕೊಳ್ಕೋಕೆ ಆಗಲ್ಲ ಎಂದು ಸ್ವತಃ ರೆಸಿಡೆಂಟ್ ಕಮಿಷನರ್‌ಗೆ ಹೇಳಿದ್ದಾರಂತೆ. ಕಾಂಗ್ರೆಸ್ ಕಚೇರಿಯಲ್ಲಿ ಎಲ್ಲೋ ಲಿಂಕ್ ಇಟ್ಟುಕೊಂಡಿರುವ ಚೋಪ್ರಾನನ್ನು ಎದುರು ಹಾಕಿಕೊಳ್ಳಲು ಅಧಿಕಾರಿಗಳಿಗೆ ಭಯ ಇದ್ದ ಹಾಗಿದೆ.
- ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.