ಭೀಷ್ಮನ ಮಾತನ್ನು ಮೋದಿ, ಶಾ ನೆರವೇರಿಸುವರೆ ?

By Web DeskFirst Published Oct 9, 2018, 6:20 PM IST
Highlights

ಅಡ್ವಾಣಿ ತನಗೆ ಇನ್ನೊಮ್ಮೆ ಗಾಂಧಿ ನಗರದಿಂದ ಸ್ಪರ್ಧಿಸುವ ಇಚ್ಛೆಯಿದೆ ಎಂದು ಹೇಳಿಕೊಂಡಿದ್ದಾರೆ. 2019ರಲ್ಲಿ ಯಾರಿಗೂ ಬಹುಮತ ಸಿಗದೆ ಇದ್ದರೆ ಒಂದು ಅವಕಾಶ ಪವಾಡ ರೂಪದಲ್ಲಿ ಸಿಕ್ಕರೂ ಸಿಗಬಹುದು ಎಂಬ ಯೋಚನೆ ಇರಬಹುದೇನೋ.

ನವದೆಹಲಿ[ಅ.09]: 90 ವರ್ಷ ವಯಸ್ಸಾದರೂ ಬಿಜೆಪಿ ಭೀಷ್ಮ ಲಾಲ…ಕೃಷ್ಣ ಅಡ್ವಾಣಿ ಅವರಿಗೆ ನಿವೃತ್ತಿ ಆಗುವ ಮನಸ್ಸಿಲ್ಲ. ಇತ್ತೀಚೆಗೆ ಗುಜರಾತ್‌ನ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹತ್ತಿರದ ನಾಯಕರೊಬ್ಬರನ್ನು ಮನೆಗೆ ಕರೆಸಿಕೊಂಡಿದ್ದ ಅಡ್ವಾಣಿ ತನಗೆ ಇನ್ನೊಮ್ಮೆ ಗಾಂಧಿ ನಗರದಿಂದ ಸ್ಪರ್ಧಿಸುವ ಇಚ್ಛೆಯಿದೆ ಎಂದು ಹೇಳಿಕೊಂಡಿದ್ದಾರೆ. 2019ರಲ್ಲಿ ಯಾರಿಗೂ ಬಹುಮತ ಸಿಗದೆ ಇದ್ದರೆ ಒಂದು ಅವಕಾಶ ಪವಾಡ ರೂಪದಲ್ಲಿ ಸಿಕ್ಕರೂ ಸಿಗಬಹುದು ಎಂಬ ಯೋಚನೆ ಇರಬಹುದೇನೋ.

ಎಲ್ಲವೂ ಅದಲು ಬದಲು

ಕಳೆದ ವಾರ ಗೋಕರ್ಣ ದೇವಸ್ಥಾನದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆದಾಗ ರಾಮಚಂದ್ರಾಪುರ ಮಠದ ಪರವಾಗಿ ವಾದಿಸಲು ಕಾಂಗ್ರೆಸ್‌ ದಿಗ್ಗಜ ಕಪಿಲ್ ಸಿಬಲ್ ನಿಂತಿದ್ದರೆ, ಎದುರಿಗೆ ರಾಮಚಂದ್ರಾಪುರ ಮಠವನ್ನು ವಿರೋಧಿಸಲು ನಿಂತವರು ಬಿಜೆಪಿಗೆ ಹತ್ತಿರದವರಾದ ಅರುಣ್‌ ಜೇಟ್ಲಿ ಅವರ ಮಿತ್ರ ಮುಕುಲ್ ರೋಹಟಗಿ ಮತ್ತು ಸಾಲಿಸಿಟರ್‌ ಜನರಲ್ ರಣಜಿತ್‌ ಕುಮಾರ್‌. ಅಂದ ಹಾಗೆ ಬಿಜೆಪಿ ಸರ್ಕಾರ ಮಠಕ್ಕೆ ಗೋಕರ್ಣ ದೇವಸ್ಥಾನ ಕೊಟ್ಟಿದ್ದನ್ನು ಕಪಿಲ್ ಸಿಬಲ್ ಸಮರ್ಥಿಸಿಕೊಳ್ಳುತ್ತಿದ್ದರೆ, ಬಿಜೆಪಿಗೆ ಹತ್ತಿರದ ವಕೀಲರು ವಿರೋಧಿಸುತ್ತಿದ್ದರು. ಕಪಿಲ್ ಸಿಬಲ್ ಅಂತೂ ದೇವಸ್ಥಾನವನ್ನು ಸರ್ಕಾರ ವಶಪಡಿಸಿಕೊಂಡಿದ್ದಕ್ಕೆ ಕರ್ನಾಟಕದಲ್ಲಿ ಕಾನೂನು ಎಂಬುದೇ ಇಲ್ಲ ಎಂದು ಟೀಕಿಸುತ್ತಿದ್ದರು.

- ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣ

click me!