
ಕೊಯಮತ್ತೂರು: ಪ್ರತಿಯೊಂದು ಸೇವೆಗೂ ಆಧಾರ್ ಜೋಡಣೆ ಕುರಿತು ಸಾಕಷ್ಟು ಜೋಕ್‌ಗಳನ್ನು ಕೇಳಿರುತ್ತೀರಿ. ಆದರೆ, ಇಲ್ಲೊಂದು ಪಾರ್ಕ್‌ಗೆ ಪ್ರವೇಶ ಮಾಡಬೇಕಾದಲ್ಲಿ ವಿವಾಹ ದೃಢೀಕರಣ ಪತ್ರ ಬೇಕೆಂದು ಕೇಳುತ್ತಿರುವುದು, ಈಗ ವಿವಾದಕ್ಕೆ ಕಾರಣವಾಗಿದೆ. ಕೊಯಮತ್ತೂರಿನ ತಮಿಳುನಾಡು ಕೃಷಿ ವಿವಿಯ ಸಮೀಪದಲ್ಲಿರುವ ಪಾರ್ಕ್‌ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಾರ್ಕ್ ಆವರಣದಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ, ಜೋಡಿಗಳು ಅಸಭ್ಯವಾಗಿ ವರ್ತಿಸುತ್ತಿವೆ. ಹೀಗಾಗಿ ಇಲ್ಲಿಗೆ ವಿವಾಹಿತ ಜೋಡಿಗಳಿಗೆ ಮಾತ್ರ ಪ್ರವೇಶ ನೀಡುವ ನಿಯಮ ರೂಪಿಸಲಾಗಿದೆ. ಆರಂಭದಲ್ಲಿ ಗುರುತು ಚೀಟಿಗಳು ಮತ್ತು ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ವಿವರಗಳನ್ನು ಕೇಳಿ ಪಾರ್ಕ್ ಒಳಗೆ ಬಿಡುವ ಕ್ರಮ ಜಾರಿಗೊಳಿಸಲಾಗಿತ್ತು. ಇದೆಲ್ಲದರ ಹೊರತಾಗಿಯೂ, ಜೋಡಿಗಳು ಅಸಭ್ಯ ವರ್ತನೆ ಮುಂದುವರೆದಿದೆ.
ಈ ಬಗ್ಗೆ ವಿದ್ಯಾರ್ಥಿಗಳು, ಕುಟುಂಬಗಳು ಹಲವು ಬಾರಿ ದೂರು ನೀಡಿವೆ. ಹೀಗಾಗಿ ಮದುವೆಯಾದವರಿಗೆ ಮಾತ್ರ ಪಾರ್ಕ್ ಒಳಗೆ ಪ್ರವೇಶ ನೀಡಲು ಪಾರ್ಕ್ ನಿರ್ವಹಣಾ ಮಂಡಳಿ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.