ಪರ್ರಿಕರ್ ಗೋವಾ ಸರ್ಕಾರದ ’ಸ್ಟೀವ್ ಜಾಬ್ಸ್’: ಕ್ಯಾನ್ಸರ್ ಎಂದು ರಾಜೀನಾಮೆ ಇಲ್ಲ

By Web DeskFirst Published Dec 14, 2018, 8:58 AM IST
Highlights

ಪರ್ರಿಕ್ಕರ್‌ ಆಡಳಿತ ಸಮರ್ಥಿಸಲು ಸ್ಟೀವ್‌ ಜಾಬ್ಸ್‌ ಉದಾಹರಣೆ!| ಕ್ಯಾನ್ಸರ್‌ ಪೀಡಿತ ಜಾಬ್ಸ್‌ ಕೂಡಾ ಸಮರ್ಥ ಆಡಳಿತ ನೀಡಿದ್ದರು.

ಪಣಜಿ[ಡಿ.14]: ಕ್ಯಾನ್ಸರ್‌ಗೆ ತುತ್ತಾದ ಹೊರತಾಗಿಯೂ, ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುತ್ತಿರುವ ತನ್ನ ಸಿಎಂ ಮನೋಹರ್‌ ಪರ್ರಿಕ್ಕರ್‌ ಅವರನ್ನು ಗೋವಾ ಸರ್ಕಾರ ಹೈಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಕೇವಲ ಕ್ಯಾನ್ಸರ್‌ ಬಂದಿದೆ ಎಂದು ಪತ್ತೆಯಾದಾಕ್ಷಣ ಪರ್ರಿಕ್ಕರ್‌ ಅವರ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಅದು ಪ್ರತಿಪಾದಿಸಿದೆ.

ಸಿಎಂ ಆರೋಗ್ಯ ಸ್ಥಿತಿ ಬಹಿರಂಗಕ್ಕೆ ಸರ್ಕಾರ ನಕಾರ!

ವಿಶ್ವವಿಖ್ಯಾತ ಆ್ಯಪಲ್‌ ಕಂಪನಿಯ ಸಿಇಒ ಆಗಿದ್ದ ಸ್ಟೀವ್‌ ಜಾಬ್ಸ್‌ ಕೂಡಾ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆದರೂ ಅವರು ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಷ್ಟೇ ಏಕೆ ಅವರ ಅತ್ಯುತ್ತಮ ಸಾಧನೆ ಹೊರಬಂದಿದ್ದೇ ಅವರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ಪತ್ತೆಯಾದ ಬಳಿಕ. ಹೀಗಾಗಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ಪತ್ತೆಯಾಗಿದೆ ಎಂಬ ಒಂದೇ ಕಾರಣಕ್ಕೆ ಒಂದು ರಾಜ್ಯದ ಮುಖ್ಯಮಂತ್ರಿಯ ರಾಜೀನಾಮೆ ಕೇಳುವುದು ಸರಿಯಾಗದು. ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಅಧಿಕಾರಿಗಳ ಜೊತೆಗೆ, ಜನಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ನಡೆಸುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಚಲಾಯಿಸುತ್ತಿದ್ದಾರೆ ಎಂದು ಗೋವಾ ರಾಜ್ಯದ ಪರ ವಕೀಲ ದತ್ತಪ್ರಸಾದ್‌ ಲಾವಂಡೆ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.

ಸಿಎಂ ರಾಜೀನಾಮೆ ಪಡೆಯಲು ಜನರಿಂದಲೇ ಪ್ರತಿಭಟನೆ

ಟ್ರಾಜನೋ ಡಿ’ಮಿಲ್ಲೋ ಎಂಬ ಗೋವಾ ಮೂಲದ ವ್ಯಕ್ತಿಯೊಬ್ಬರು, ಪರ್ರಿಕ್ಕರ್‌ ಕ್ಯಾನ್ಸರ್‌ಗೆ ತುತ್ತಾಗಿದ್ದು, ಇದು ತಮ್ಮ ಮೂಲಭೂತ ಹಕ್ಕಗಳು ಮತ್ತು ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿದೆ. ಹೀಗಾಗಿ ಅವರ ಆರೋಗ್ಯದ ಕುರಿತು ಮಾಹಿತಿಯನ್ನು ಬಹಿರಂಗ ಮಾಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

click me!