ಎಲೆಕ್ಷನ್ ವಾರ್: ಎದುರಾದರೂ ಪರಸ್ಪರ ಮಾತನಾಡದ ಮೋದಿ-ರಾಹುಲ್‌!

By Web DeskFirst Published Dec 14, 2018, 8:35 AM IST
Highlights

ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಗುರುವಾರ ಮುಖಾಮುಖಿಯಾದರೂ, ಪರಸ್ಪರರು ಮಾತನಾಡದೇ ಮುಖ ತಿರುಗಿಸಿಕೊಂಡು ಹೋದ ಪ್ರಸಂಗ ನಡೆಯಿತು.

ನವದೆಹಲಿ[ಡಿ.14]: 2001ರಲ್ಲಿ ಸಂಭವಿಸಿದ ಸಂಸತ್‌ ಮೇಲಿನ ದಾಳಿಯ ವರ್ಷಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಗುರುವಾರ ಮುಖಾಮುಖಿಯಾದರೂ, ಪರಸ್ಪರರು ಮಾತನಾಡದೇ ಮುಖ ತಿರುಗಿಸಿಕೊಂಡು ಹೋದ ಪ್ರಸಂಗ ನಡೆಯಿತು.

ಇಬ್ಬರೂ ನಾಯಕರು ಅಂತರ ಕಾಯ್ದುಕೊಂಡರು. ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ ಸೇರಿದಂತೆ ಅನೇಕರು ಈ ವೇಳೆ ಹಾಜರಿದ್ದರು. ಮನಮೋಹನ ಸಿಂಗ್‌ ಅವರ ಜತೆ ಮೋದಿ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಆದರೆ ರಾಹುಲ್‌ ಗಾಂಧಿ-ಮೋದಿ ಪರಸ್ಪರರು ಮಾತನಾಡಿಕೊಳ್ಳಲೇ ಇಲ್ಲ. ಕೇಂದ್ರ ಸಚಿವರಾದ ರಾಮದಾಸ್‌ ಅಠಾವಳೆ ಹಾಗೂ ವಿಜಯ್‌ ಗೋಯಲ್‌ ಅವರು ರಾಹುಲ್‌ ಕೈಕುಲುಕಿ ಕುಶಲೋಪರಿ ವಿಚಾರಿಸಿದರು.

click me!