ಅನಂತ್ ಸಾವಿಗೆ ವಿಕೃತಿ: ಸಮರ್ಥಿಸಿಕೊಂಡ ಮುಸ್ಲಿಂ ಪೇಜ್ ಅಡ್ಮಿನ್

Published : Nov 12, 2018, 01:51 PM ISTUpdated : Nov 12, 2018, 02:25 PM IST
ಅನಂತ್ ಸಾವಿಗೆ ವಿಕೃತಿ: ಸಮರ್ಥಿಸಿಕೊಂಡ ಮುಸ್ಲಿಂ ಪೇಜ್ ಅಡ್ಮಿನ್

ಸಾರಾಂಶ

ಕೇಂದ್ರ ಸಚಿವ ಅನಂತ್ ಕುಮಾರ್ ಸಾವಿಗೆ ಸಂತೋಷ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಮ್ ಫೇಸ್‌ಬುಕ್ ಪೇಜಿಗೆ ಅತೀವ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮತ್ತೆ ಈ ಪೇಜಿನ ಅಡ್ಮಿನ್ ಮತ್ತೊಂದು ಅನಂತ್ ವಿರೋಧಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರು: ಕೇಂದ್ರ ಸಚಿವ ಅನಂಕ್ ಕುಮಾರ್ ಸಾವಿನಲ್ಲಿಯೂ ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಪೇಜ್‌ಗೆ ವಿಪರೀತ ಟೀಕೆಗಳು ವ್ಯಕ್ತವಾಗಿವೆ. ಈ ಬೆನ್ನಲ್ಲೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿನ ಪೇಜಿನ ಅಡ್ಮಿನ್, ಮತ್ತೊಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

'ಅನಂತ್ ಕುಮಾರ್ ಸಾವಿನ ಹಿಂದೆ ದುಃಖ ಪಡುವ ಅವಶ್ಯಕತೆ ಇಲ್ಲ ಸತ್ತಿದ್ದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಏನು ಗೊತ್ತಿಲ್ಲದ ಅಮಾಯಕರಿಗೆ ಕೋಮು ವಿಷ ಬೀಜ ಬಿತ್ತಿ ಆಳುವ ಇಂಥವರೆಲ್ಲ ಆದಷ್ಟು ಬೇಗ ನಿರ್ನಾಮ ಆಗಲಿ.

ಏನು ಗೊತ್ತಿಲ್ಲದ ಅಮಾಯಕರಿಗೆ ಧರ್ಮದ ಅಮಲು ಬಿತ್ತಿ ಮುಸ್ಲಿಮರನ್ನು ರಾಜಕೀಯ ಕಾರಣಕ್ಕೆ ರಾಮನನ್ನು ಎದುರು ಹಾಕಿ ಕೊಲ್ಲಲು ಹೊರಟಿದ್ದ ನಾಯಿಗಳಾದ ಆಡ್ವಾಣಿ ಸೇರಿ ಆತನ ಚಮಚ ಇಂದು ಸತ್ತ ಅನಂತ್ ಕುಮಾರ್ ಸಾವಿನಲ್ಲಿ ಸಂಭ್ರಮಿಸಬಾರದು ನಿಜ. ಆದರೆ ಬಾಬರೀ ಮಸೀದಿ ಧ್ವಂಸಕ್ಕೆ ಕಾರಣವಾದ ಹಾಗೂ ಸಾವಿರಾರು ಅಮಾಯಕ ಮನುಷ್ಯರ ಹತ್ಯೆಗೆ ಮುಹೂರ್ತ ಕಲ್ಪಿಸಿದ ರಥಯಾತ್ರೆಯ ಸೂತ್ರದಾರರಲ್ಲಿ ಒಬ್ಬನಾದ ಅನಂತಕುಮಾರ್ ನನ್ನ ಮುಸ್ಲಿಮರು ಸೇರಿ ಮನುಷತ್ವ ಇರುವ ಜನರು ಕ್ಷಮಿಸಲು ಹೇಗೆ ಸಾಧ್ಯ?

ಇಂದಿಗೂ ಆಡ್ವಾಣಿಯ ನೀಲಿ ಕಣ್ಣಿನ ಹುಡುಗ ಎನ್ನುವ ಈ ಭಯೋತ್ಪಾದಕ ಅನಂತ್ ಕುಮಾರ್ ರಥಯಾತ್ರೆಗೆ ಆಡ್ವಾಣಿ ಜೊತೆ ಸೇರಿ ಸಾವಿರಾರು ಮುಸ್ಲಿಮರ ಮಾರಣ ಹೋಮಕ್ಕೆ ಕಾರಣನಾದ ಕುತಂತ್ರಿ ಬ್ರಾಹ್ಮಣ. ಅಲ್ಲಾ ವಿರೋಧಿ ಆದ ಇವನ ಸಾವು ನಾವು ಬದುಕಿದ್ದಾಗಲೇ ಕಣ್ಣಾರೆ ನೋಡಿದ್ದು ಬಹಳ ಸಂತೋಷವಾಗಿದೆ. ಈತ ಮುಸ್ಲಿಂ ವಿರೋಧಿ ಆಗಿದ್ದರೆ ಈತನ ಸಾವಿಗೆ ಸಂತಾಪ ಪಡಬಹುದಿತ್ತು. ಈತ ವಿರೋದಿಸಿದ್ದು ಸರ್ವ ಲೋಕದ ಒಡೆಯನಾದ ಅಲ್ಲಾ ಹಾಗೂ ಆತನನ್ನು ಆರಾಧಿಸಲು ಆಯ್ಕೆಯಾದ ಸ್ಥಳಗಳನ್ನು. ಅಲ್ಲಾಹನ ವಿರೋಧಿ ಶೈತಾನ್ ಇಬ್ಲಿಸ್. ಇಂಥ ಕ್ರಿಮಿಗಳ ಸಾವು ಬಾಹ್ಯ ಜಗತ್ತಿಗೆ ಮುಸ್ಲಿಮರು ತೋರಿಸದಿದ್ದರೂ ಮನಸ್ಸು ಒಳಗಿಂದ ಒಳಗೆ ಶುಕರ್ ಅಲ್ಲಾಹ ಅಂದಿರುವುದು ಸುಳ್ಳಾಗಲು ಸಾಧ್ಯವಿಲ್ಲ.

ಗೌರಿ ಲಂಕೇಶ್, ಅನಂತಮೂತಿ೯, ಸಿದ್ಧರಾಮಯ್ಯನವರ ಪುತ್ರ ಸೇರಿದಂತೆ ಹಲವು ಬಿಜೆಪಿಯೇತರರು ಸತ್ತಾಗ ಇಲ್ಲಿ ಹಲವು ಫೇಸ್ ಬುಕ್ ಪೇಜುಗಳು ಅಕೌಂಟುಗಳು ನಿನ್ನೆ ತಾನೇ ಜೈಲು ಪಾಲಾದ ರೆಡ್ಡಿಯಂಥ ರಾಜಕಾರಣಿಗಳು ಸಂಭ್ರಮಿಸಿದ್ದರು. ಇಲ್ಲಿನ ಮುಖ್ಯಧಾರೆಯ ಯಾವ ಮಾಧ್ಯಮಗಳೂ ಅವನ್ನು ಸುದ್ದಿ ಮಾಡಿರಲಿಲ್ಲ. ನಮಗೆ ಮುಸ್ಲಿಮರ ಸಾವಿಗೆ ಕಾರಣರಾಗಿ ದೇಶಕ್ಕೆ ಜಾತಿಯ ವಿಷ ಬೀಜ ಬಿತ್ತಿದ ಇಂತ ಜಾತಿ ವಿಷಕಾರಿ ಜಂತುಗಳ ಸಾವಿಗೆ ದುಃಖಪಡುವ ಯಾವ ಅಗತ್ಯವೂ ಇಲ್ಲ. ಇಂಥವರ ಮನಸ್ಥಿತಿಯಲ್ಲಿ ಸಾಮರಸ್ಯದ ಚಿಂತನೆಯೇ ಇಲ್ಲ. ಇವರಲ್ಲಿ ಇರುವುದು ಕೋಮುಗಳಿಗೆ ಬೆಂಕಿ ಹಾಕಿ ದೇಶ ಸುಡುವ ಮನಸ್ಥಿತಿ ಎನ್ನುದನ್ನು ಮನಗಾಣಬೇಕು. ಇಂಥವರ ಸಾವು ಕಾನ್ಸರ್ ಗಿಂತ ಭಯಾನಕವಾದ ಜ್ಞಾಪಕ ಶಕ್ತಿ ಕಳೆದು ಕೊಂಡು ವಾಜಪೇಯಿ ಹುಚ್ಚನಾಗಿ ನರಳಿ ನರಳಿ ಸತ್ತಂತೆ ಬರಲಿ ಎಂದು ಅಲ್ಲಾಹನಲ್ಲಿ ದುವಾ ಮಾಡುತ್ತೇವೆ.

- ಅಡ್ಮಿನ್ ಬಳಗ ಮಂಗಳೂರು ಮುಸ್ಲಿಮ್ಸ್'

ಈ ಪೇಜ್ ಹಲವರ ಆಕ್ಷೇಪವೆತ್ತಿದ್ದು, ರಿಪೋರ್ಟ್ ಮಾಡಿದ್ದಾರೆ. ಈ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ.


ಇಂಥ ಹೇಳಿಕೆಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತದೆ ಎನ್ನುವ ನಿಟ್ಟಿನಲ್ಲಿ, ಫೇಸ್ ಬುಕ್ ಬಳಕೆದಾರರು ಈ ಪೋಸ್ಟಿಗೆ ಅತೀವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು