ದಾಳಿ ಮಾಡಿ ಪಾಕ್ ಸರ್ವನಾಶ ಮಾಡಿ- ಹುತಾತ್ಮ ಯೋಧ ಗುರು ಪತ್ನಿ ಆಕ್ರೋಶ!

Published : Mar 07, 2019, 06:19 PM IST
ದಾಳಿ ಮಾಡಿ ಪಾಕ್ ಸರ್ವನಾಶ ಮಾಡಿ- ಹುತಾತ್ಮ ಯೋಧ ಗುರು ಪತ್ನಿ ಆಕ್ರೋಶ!

ಸಾರಾಂಶ

ಪಾಕಿಸ್ತಾನವನ್ನು ಸುಮ್ಮನೆ ಬಿಡಬಾರದು. ಸರ್ವನಾಶ ಮಾಡಬೇಕು ಎಂದು ಪುಲ್ಮಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರು ಪತ್ನಿ ಆಕ್ರೋಶದ ನುಡಿಗಳು ಇಲ್ಲಿವೆ.

ಧಾರವಾಡ(ಮಾ.07): ಸೈನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಹೇಳಿದ್ದಾರೆ. ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಕಲಾವತಿ, ಭಾರತೀಯ ಸೇನೆ ನಡೆಸಿದ ಏರ್‌ಸ್ಟ್ರೈಕ್ ಸಾಕ್ಷಿ ಕೇಳುತ್ತಿರುವವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕಣಿವೆಯಲ್ಲಿ ಮತ್ತೊಂದು ಬ್ಲಾಸ್ಟ್: ಬಸ್ ನಲ್ಲಿ ಚೀನೀ ಗ್ರೆನೇಡ್ ಸ್ಫೋಟ

ಭಾರತೀಯ ಸೈನಿಕರನ್ನ ಪಾಕಿಸ್ತಾನ ಸಾಯಿಸುತ್ತಿದೆ. ಭಯೋತ್ವಾದನೆಗೆ ಕುಮ್ಮಕ್ಕು ನೀಡಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ. ಇಷ್ಟಾದರೂ ಪಾಕಿಸ್ತಾನವನ್ನ ಸುಮ್ಮನೆ ಬಿಡುತ್ತಿದ್ದಾರೆ ಅನ್ನೋದೇ ಗೊತ್ತಿಲ್ಲ. ನಾವು ಸೈನಿಕರನ್ನು ಕಳೆದುಕೊಳ್ಳುತ್ತಲೇ ಇದ್ದೇವೆ. ಆದರೆ ಪಾಕಿಸ್ತಾನದಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಸ್ಥಿತಿ ಇಲ್ಲ ಎಂದು ಕಲಾವತಿ ಹೇಳಿದ್ದಾರೆ.

ಇದನ್ನೂ ಓದಿ: ಗಡಿಯಲ್ಲಿ ಪಾಕ್‌ ಸೇನಾ ಜಮಾವಣೆ ಹೆಚ್ಚಳ!

ಅವರು ಎಷ್ಟು ಸೈನಿಕರನ್ನು ಸಾಯಿಸಿದ್ದಾರೋ ಅದರ ಎರಡು ಪಟ್ಟು ಪಾಕ್ ಸೈನಿಕರನ್ನ ಸಾಯಿಸಬೇಕು. ಈ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದಿದ್ದಾರೆ. ಸೇನೆಯ ಪ್ರತಿ ಹೆಜ್ಜೆಯನ್ನು ಬೆಂಬಲಿಸಬೇಕು. ಈ ಮೂಲಕ ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ನೆಕ್ಸ್ಟ್ ಟೈಮ್ ಸಾಕ್ಷಿ ಕೇಳೋರನ್ನ ವಿಮಾನಕ್ಕೆ ಕಟ್ಟೋಣ: ವಿಕೆ ಸಿಂಗ್!

ಪುಲ್ವಾಮಾ ಭಯೋತ್ಪಾದ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ಮಂಡ್ಯದ ಯೋಧ ಗುರು ಕೂಡ ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿರುವ ಭಾರತೀಯ ಸೇನೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುಣತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ