ವಾರಾಂತ್ಯಕ್ಕೆ ಹೊಸ ಸರ್ಕಾರ್ , 9 ತಂಡದೊಂದಿಗೆ IPL ವಾರ್; ನ.21ರ ಟಾಪ್ 10 ಸುದ್ದಿ!

By Web Desk  |  First Published Nov 21, 2019, 5:28 PM IST

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ನಾಟಕ ಅಂತಿಮ ಹಂತಕ್ಕೆ ಕಲುಪಿದ್ದು, ವಾರಾಂತ್ಯಕ್ಕೆ ಹೊಸ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರ ಪತನವಾಗೋ ಮೂಲಕ ಹಾವು ಮುಂಗುಸಿಯಾಗಿರುವ ಕಾಂಗ್ರೆಸ್ ಜೆಡಿಸಿ, ಉಪಚುನಾವಣೆಯಲ್ಲಿ ಸೀಕ್ರೆಟ್ ಮೈತ್ರಿ ಮಾಡಿಕೊಂಡಿದೆ. ಬಿಕಿನಿ ತೊಟ್ಟ ನಟಿ ಐಂದ್ರಿತಾ ರೇ ಮತ್ತೆ ಸುದ್ದಿಯಾಗಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ 8ರ ಬದಲು 9 ತಂಡ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.


1) ’15 ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವು, ವರದಿಯಲ್ಲಿ ಬಹಿರಂಗ'

Tap to resize

Latest Videos

undefined

ಉಪ ಚುನಾವಣೆ ಹಿನ್ನೆಲೆಯಲ್ಲಿ ಹದಿನೈದು ಕ್ಷೇತ್ರದ ಉಸ್ತುವಾರಿಗಳ ಸಭೆ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವ ಸ್ಥಿತಿಯಲ್ಲಿದೆ ಎಂಬ ವರದಿ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪಚುನಾವಣೆಯ ಉಸ್ತುವಾರಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

2) ಬೆಂಗಳೂರಿನಲ್ಲಿದ್ದಾರೆ ಬ್ಯಾಡ್ ಬಾಯ್ಸ್; ಈಜು ಬಾರದವರೇ ಇವರ ಟಾರ್ಗೆಟ್!


 
ಡ್ ಬಾಯ್ಸ್. ಈಜು ಬಾರದ ಹುಡುಗರೇ ಇವರ ಟಾರ್ಗೆಟ್.  ಈಜು ಬರಲ್ಲ ಅಂತ ಗೊತ್ತಾದ್ರೆ ಚಿತ್ರಹಿಂಸೆ ಕೊಡ್ತಾರೆ. ಬ್ಯಾಡ್ ಬಾಯ್ಸ್ ಚಿತ್ರಹಿಂಸೆಗೆ ಸಿಕ್ಕಿದೆ ವಿಡಿಯೋ ಸಾಕ್ಷಿ. ಬಾಲಕನೊಬ್ಬನನ್ನು ಕೆರೆಯಲ್ಲಿ ಮುಳುಗಿಸಿ ಹಿಂಸಿಸಿದ್ದಾರೆ ಯುವಕರು. ಕಂಠೀರವ ಸ್ಟೇಡಿಯಂ ಕೆರೆ ಬಳಿ ಈ ಘಟನೆ ಸಂಭವಿಸಿದೆ. 

3) 'ಎಂಟಿಬಿ ಗೆದ್ರೆ ಬರೀ ಸಚಿವ: ನಾನು ಗೆದ್ದರೆ ಬಿಜೆಪಿ ಸರ್ಕಾರ ಪತನ, ಸಿದ್ದು ಸಿಎಂ!'

ಮತ​ದಾ​ರರು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಅವ​ರ​ನ್ನು ಗೆಲ್ಲಿಸಿದರೆ, ಅವ​ರು ಮಂತ್ರಿಯಾಗಬಹುದು. ಆದರೆ, ನನಗೆ ಮತ ಹಾಕಿ ಗೆಲ್ಲಿಸಿದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಸುರೇಶ್‌ ಹೇಳಿದ್ದಾರೆ.

4) IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

ಐಪಿಎಲ್ ಟೂರ್ನಿಗೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು ತಯಾರಿ ನಡೆಸುತ್ತಿವೆ. ಈಗಾಗಲೇ ಆಟಗಾರರನ್ನು ಖರೀದಸುವ, ಕೈಬಿಡುವ ಅಥವಾ ಉಳಿಸಿಕೊಳ್ಳುವ ಪ್ರಕ್ರಿಯ ಮುಗಿದಿದೆ. ಇದೀಗ ಡಿಸೆಂಬರ್ 19 ರಂದು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಕೆಯೆಗೆ ಫ್ರಾಂಚೈಸಿ ಸಜ್ಜಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ 9 ತಂಡಗಳನ್ನು ಆಡಿಸಲು ಪ್ಲಾನ್ ರೆಡಿಯಾಗಿದೆ.

5) ಇದೇನಾಯ್ತಪ್ಪಾ! ಮದ್ವೆ ಆದ್ಮೇಲೆ ಐಂದ್ರಿತಾ ಬಿಕಿನಿ ಲುಕ್‌ಗೆ ಬಂದ್ಬಿಟ್ರು

ಮನಸಾರೆ, ಮೆರವಣಿಗೆ ಚೆಲುವೆ ಐಂದ್ರಿತಾ ರೇ ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಫೋಟೊ ಹಾಕುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಬಿಕಿನಿ ತೊಟ್ಟಿರುವ ಬ್ಲಾಕ್ ಅಂಡ್ ವೈಟ್ ಬಣ್ಣದಲ್ಲಿರುವ ಫೋಟೋ ಹಾಗೂ ಇನ್ನಿತರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

6) ಬಾಲ್ ಒದ್ದು ಗೋಲ್ ಮಾಡಿದ ಸನ್ನಿಗೆ ಬೋಲ್ಡ್ ಆದ ಫ್ಯಾನ್ಸ್!

ಬಾಲಿವುಡ್ ಸ್ಮಾರ್ಟಿ ಹಾಗೂ ಕ್ಯೂಟಿ ಸನ್ನಿ ಲಿಯೋನ್ ದೆಹಲಿ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ಕಾರಣ ಪ್ರತಿ ಆಟಕ್ಕೂ ಚಿಯರ್ ಹೇಳಲು ಭಾಗಿಯಾಗುತ್ತಾರೆ. ಈ ವೇಳೆ ಬ್ರೇಕ್ ಟೈಂನಲ್ಲಿ ಕೆಲ ಸಮಯ ಫುಟ್ಬಾಲ್ ಆಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

7) ಫೆವರಿಟ್ ಬಂಗಾರ ಇಳಿದಿದೆ: ಖರೀದಿ ಭರದಿಂದ ಸಾಗಿದೆ!

ಚಿನ್ನ, ಬೆಳ್ಳಿ ದರ ದೇಶೀಯ ಮಾರುಕಟ್ಟೆಯಲ್ಲಿ ಇಂದೂ ಕೂಡ ಕೊಂಚ ಇಳಿಕೆ ಕಂಡಿದೆ.  ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.7ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 38,169 ರೂ. ಆಗಿದೆ.

8) ಡಿವೋರ್ಸ್ ಆದರೂ ದೋಸ್ತಿ! 3 ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ‘ಸೀಕ್ರೆಟ್’ ಮೈತ್ರಿ.

ಸರ್ಕಾರ ಪತನವಾಗುತ್ತಿದ್ದಂತೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿಯೂ ಮುಗಿದಿದೆ. ಇನ್ನೇನಿದ್ದರೂ ಸ್ವತಂತ್ರ ಹೋರಾಟ ಎಂದು ಉಭಯಪಕ್ಷಗಳು ಘೋಷಿಸಿಕೊಂಡಿದ್ದವು. ಎರಡೂ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಕೂಡಾ ನಡೆಸಿದ್ದಾರೆ.

9) ವಾರಾಂತ್ಯಕ್ಕೆ ರಚನೆಯಾಗಲಿದೆ ಹೊಸ ಸರ್ಕಾರ: ತ್ರಿಮೂರ್ತಿಗಳ ಕನಸು ಸಾಕಾರ?

ಮಹಾರಾಷ್ಟ್ರದ ಮಹಾ ನಾಟಕಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದ್ದು, ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಈ ವಾರಾಂತ್ಯದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಡಿ.01ರೊಳಗಾಗಿ ಸರ್ಕಾರ ರಚನೆಯಾಗುವ ಸಂಭವವಿದೆ ಎನ್ನಲಾಗಿದೆ.

10) ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!

ಏಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ 29 ವರ್ಷದ ವೈದ್ಯೆ ತಮ್ಮ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಅಧಿಕ ಪ್ರಮಾಣದ ಅನಸ್ತೇಶಿಯಾದಿಂದ ಮೃತಪಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

click me!