ಐಐಟಿ ಹಾಸ್ಟೆಲ್‌ನಲ್ಲಿ ಕಾಂಡೋಮ್ ಬಳಸಿದ ವಿದ್ಯಾರ್ಥಿ: ನೆಟ್ಟಿಗರ ಸಪೋರ್ಟ್

By Web DeskFirst Published Dec 5, 2018, 3:18 PM IST
Highlights

 ಹಾಸ್ಟೆಲ್ ನಲ್ಲಿ  ವಿದ್ಯಾರ್ಥಿಯೋರ್ವ ಕಾಂಡೋಮ್ ಬಳಕೆ ಮಾಡಿದ್ದಕ್ಕೆ ಆತನಿಗೆ ದಂಡ ವಿಧಿಸಿದ ಮದ್ರಾಸ್ ಐಐಟಿ ಸಾಕಷ್ಟು ಟ್ರೋಲ್ ಆಗಿದೆ. 

ಮದ್ರಾಸ್  : ಹಾಸ್ಟೆಲ್ ರೂಮ್ ನಲ್ಲಿ ಕಾಂಡೋಮ್ ಬಳಕೆ ಮಾಡಿದ್ದಕ್ಕೆ ವಿದ್ಯಾರ್ಥಿಗೆ ದಂಡ ವಿಧಿಸಿದ್ದ ಮದ್ರಾಸ್ ಐಐಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಹಾಸ್ಟೆಲ್ ನಲ್ಲಿ ಕಾಂಡೋಮ್ ಬಳಕೆ ಮಾಡಿದ್ದಾನೆ ಎಂದು ವಿದ್ಯಾರ್ಥಿಗೆ 5 ಸಾವಿರ ದಂಡ ವಿಧಿಸಲಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿದ್ಯಾರ್ಥಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಆತ ಮಾಡಿದ್ದು ತಪ್ಪಲ್ಲ ಎಂದು ಹೇಳಿದ್ದಾರೆ. 

ಹಾಸ್ಟೆಲ್ ನಿಯಮಾವಳಿಗಳ ಪ್ರಕಾರ ಇಲ್ಲಿ ಕಾಂಡೋಮ್ ಬಳಕೆ ನಿಷೇಧಿಸಿಲ್ಲ. ಆದರೆ ಅನಧಿಕೃತವಾಗಿ ಇಲ್ಲಿನ ಸಿಬ್ಬಂದಿ ಈ ನಿಯಮ ಮಾಡಿಕೊಂಡಿದ್ದು,   ಏಕಾ ಏಕಿ ಕೊಠಡಿಗಳನ್ನು ಪರಿಶೀಲನೆ ಮಾಡಿದ ವೇಳೆ ಇಲ್ಲಿ ಕಾಂಡೋಮ್ ಪತ್ತೆಯಾಗಿವೆ. 

ಆದರೆ ರಾತ್ರಿ 9 ಗಂಟೆಯವರೆಗೆ ವಿದ್ಯಾರ್ಥಿಗಳ ಕೊಠಡಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ತೆರಳಲು ವಿದ್ಯಾರ್ಥಿನಿಯರಿಗೆ ಅವಕಾಶವಿದೆ ಎಂದು ಹೇಳಿದ್ದಾರೆ. 

ಇನ್ನು ವಿದ್ಯಾರ್ಥಿಯ ವಿವರವನ್ನು ಐಐಟಿ ಬಹಿರಂಗ ಮಾಡಿದ್ದು, ಇದರ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಾವು ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.  ಆದರೆ ವಿದ್ಯಾರ್ಥಿಗಳು ಮಾತ್ರ ಈ ಬಗ್ಗೆ ಸಾಕ್ಷ್ಯ ಒದಗಿಸಿದ್ದಾರೆ. 

click me!