ಮೋದಿ ವಿರುದ್ಧ ಸಿಡಿದೆದ್ದ ಸಹೋದರ: ಪ್ರತಿಭಟನೆಯ ನೇತೃತ್ವ!

By Web DeskFirst Published Dec 5, 2018, 3:14 PM IST
Highlights

ಪ್ರಧಾನಿ ಮೋದಿ ವಿರುದ್ಧ ಸಹೋದರ ಪ್ರಹ್ಲಾದ್ ಮೋದಿ ಪ್ರತಿಭಟನೆ! ಪ್ರಧಾನಿ ನಿರ್ಣಯಕ್ಕೆ ಸಹೋದರ ಪ್ರಹ್ಲಾದ್ ಮೋದಿ ಅಪಸ್ವರ! ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಪಟ್ಟ ನೇರ ಲಾಭ ವರ್ಗಾವಣೆ ಯೋಜನೆ! ನೇರ ಲಾಭ ವರ್ಗಾವಣೆ ಯೋಜನೆ ಮರುಪರಿಶೀಲನೆಗೆ ಪ್ರಹ್ಲಾದ್ ಮೋದಿ ಆಗ್ರಹ! ಪ್ರತಿಭಟನೆ ಲಾಭ ಪಡೆಯಲೆತ್ನಿಸಿದ ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದ ಪ್ರಧಾನಿ ಸಹೋದರ! ಅಖಿಲ ಭಾರತೀಯ ನ್ಯಾಯಬೆಲೆ ಅಂಗಡಿ ಡೀಲರ್ಸ್ ಒಕ್ಕೂಟದ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ

ಔರಂಗಬಾದ್(ಡಿ.05): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರ ಸಹೋದರ ಪ್ರಹ್ಲಾದ್ ಮೋದಿಯೇ ಪ್ರತಿಭಟನೆ ನಡೆಸಿದ ಅಪರೂಪದ ಪ್ರಸಂಗ ನಡೆದಿದೆ. ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ಯೋಜನೆಯೊಂದನ್ನು ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಪ್ರಹ್ಲಾದ್ ಮೋದಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.  

ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಪಟ್ಟ ನೇರ ಲಾಭ ವರ್ಗಾವಣೆ  ಯೋಜನೆಯನ್ನು ಮರುಪರಿಶೀಲನೆ ಮಾಡಬೇಕೆಂದು ಪ್ರಹ್ಲಾದ್ ಮೋದಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನೇರ ಲಾಭ ವರ್ಗಾವಣೆ ಯೋಜನೆಯಿಂದಾಗಿ ರೇಷನ್ ಅಂಗಡಿ ಮಾಲಿಕರಿಗೆ ದ್ರೋಹವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಇದೇ ವೇಳೆ ತಮ್ಮ ಪ್ರತಿಭಟನೆಯ ವಿಷಯವನ್ನೇ ಲಾಭವಾಗಿ  ಬಳಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ಪ್ರಹ್ಲಾದ್ ಮೋದಿ ಹರಿಹಾಯ್ದಿದ್ದು, ನರೇಂದ್ರ ಮೋದಿ ಸರ್ಕಾರ ನೋಟು ನಿಷೇಧ ಜಿಎಸ್ ಟಿ ಜಾರಿಗೆ ತಂದಿದ್ದು ಕೆಲವರಿಗೆ ನೋವು ಉಂಟುಮಾಡಿರಬಹುದು ಆದರೆ ನ್ಯಾಯಯುತವಾಗಿ ಉದ್ಯಮ ಮಾಡುವವರಿಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದಿದ್ದಾರೆ. 

ಅಖಿಲ ಭಾರತೀಯ ನ್ಯಾಯಬೆಲೆ ಅಂಗಡಿ ಡೀಲರ್ಸ್ ಒಕ್ಕೂಟದ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ, ಔರಂಗಾಬಾದ್ ಜಿಲ್ಲಾ ನ್ಯಾಯ ಬೆಲೆ ಅಂಗಡಿ ಪೂರೈಕೆದಾರರ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ನೇರ ಲಾಭ ವರ್ಗಾವಣೆ ಯೋಜನೆಯನ್ನು ಮರುಪರಿಶೀಲನೆ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೂ ಆಗ್ರಹಿಸಿದ್ದು, ಜನತೆ ಹಾಗೂ ಅಂಗಡಿ ಮಾಲಿಕರು ಇಬ್ಬರಿಗೂ ಸಮಸ್ಯೆಯಾಗದಂತೆ ನಿರ್ಧಾರ ಕೈಗೊಳ್ಳಬೇಕೆಂದು ಪ್ರಹ್ಲಾದ್ ಮೋದಿ ಒತ್ತಾಯಿಸಿದ್ದಾರೆ. 

click me!