ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಎದುರಾಳಿ ಯಾರು..?

By Web DeskFirst Published Mar 9, 2019, 3:36 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಸ್ಪರ್ಧಿಸುವ ಸಾಧ್ಯತೆ ಇದ್ದು ಇವರಿಗೆ ಎದುರಾಳಿಯಾಗಿ ದೇವೇಗೌಡ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. 

ಮೈಸೂರು : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ.  ಚುನಾವಣಾ ದಿನಾಂಕ ಘೋಷಣೆಗೆ ಕ್ಷಣ ಗಣನೆ ಆರಂಭವಾಗಿದೆ. 

ಇದೇ ವೇಳೆ ಚುನಾವಣಾ ಸ್ಪರ್ಧೆಯ ಬಗ್ಗೆ ಮಾತನಾಡಿರುವ ಮೈಸೂರ ಸಂಸದ ಪ್ರತಾಪ್ ಸಿಂಹ ತಮ್ಮ ಎದುರಾಳಿ ಬಗ್ಗೆ ತಮಗೆ ಯಾವುದೇ ಚಿಂತೆ ಇಲ್ಲ ಎಂದು ಹೇಳಿದ್ದಾರೆ. 

ಮೈಸೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರ ಸುದ್ದಿಯಾಗಿದ್ದು,  ನಾನು ಎದುರಾಳಿ ಯಾರು, ಯಾವ ಪಕ್ಷದಿಂದ ಬರಬಹುದು ಎನ್ನುವ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.  

ಪ್ರಕಾಶ್​​ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್​, ಸಂಸದ ಪ್ರತಾಪ್​ ಸಿಂಹ ಪೊಲೀಸ್ ವಶಕ್ಕೆ

ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಅಭ್ಯರ್ಥಿ ಯಾರು, ಯಾವ ಜಾತಿಯವರು, ಯಾವ ಕಾಂಬಿನೇಷನ್, ಎಷ್ಟು ದುಡ್ಡು ಬೇಕಾಗುತ್ತದೆ ಎನ್ನುವುದು ಬಹಳ ಹಿಂದೆಯಿಂದ ನಡೆದುಕೊಂಡು ಬಂದಿದೆ.   ಮೋದಿ ಸರ್ಕಾರ ಬಂದ ಮೇಲೆ ನಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎನ್ನುವಂತಾಗಿದೆ.  ನಾವು ನಮ್ಮ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರ ಬಳಿ ಹೊಗುತ್ತೇವೆ ಎಂದು ಪ್ರತಾಪ್  ಸಿಂಹ ಹೇಳಿದ್ದಾರೆ. 

ಸಂಸದರ ನಿಧಿ ಬಳಕೆಯಲ್ಲಿ ಪ್ರತಾಪ್‌ ನಂ.1 ಸ್ಥಾನದಲ್ಲಿದ್ದರೆ ಇವರು ಕೊನೆ ಸ್ಥಾನದಲ್ಲಿದ್ದಾರೆ!

 ಈ ಬಾರಿ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಥವಾ ಜೆಡಿಎಸ್ ನಿಂದ ಯಾರೇ ಸ್ಪರ್ಧಿಸಿದರೂ ಚಿಂತೆ ಇಲ್ಲ ಎಂದರು.  
 
ಅರೆಸ್ಟ್ ವಿಚಾರ : ಇನ್ನು  ಪ್ರತಾಪ್ ಸಿಂಹ ಅರೆಸ್ಟ್ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದು, ವಿಚಾರಣೆ ಮುಂದೂಡಿದ್ದರಿಂದ ತಾವು ಅಲ್ಲಿಯೇ ಇರಬೇಕಾಯ್ತು.  ತಮ್ಮ ವಿರುದ್ಧ ಬೇಲೆಬಲ್ ವಾರೆಂಟ್ ಇದ್ದು, 10 ಸಾವಿರ ಹಣ ಕಟ್ಟಿಸಿಕೊಂಡು ಕಳುಹಿಸದರು. ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರೇ ನೋಡಿಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದರು. 

click me!