ಮೇಲ್ವರ್ಗದ ಬಡವರಿಗೆ ಮೀಸಲು ಮಸೂದೆ ಲೋಕಸಭೆಯಲ್ಲಿ ಪಾಸ್.. ರಾಜ್ಯಸಭೆಯಲ್ಲಿ ಏನಾಗುತ್ತೆ?

By Web DeskFirst Published Jan 8, 2019, 10:50 PM IST
Highlights

ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10 ರಷ್ಟು ಮೀಸಲು ನೀಡುವ ಮಸೂದೆಗೆ ಲೋಕಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಬುಧವಾರ ಈ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.

ನವದೆಹಲಿ[ಜ.08]  ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ದಿಟ್ಟ ಕ್ರಮಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ. ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲು ನೀಡುವ ಮಸೂದೆ ಲೋಕಸಭೆಯಲ್ಲಿ ಪಾಸ್ ಆಗಿದೆ.

ನಿರೀಕ್ಷೆಯಂತೆ ಮಂಗಳವಾರ ಮಸೂದೆ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ.  ಸೋಮವಾರ ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು ಇಂದು ಮಂಡನೆ ಮಾಡಲಾಯಿತು.

ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?

ಈ ಮಸೂದೇ ಜಾರಿಗೆ ಬಂದರೆ ಉನ್ನತ ವರ್ಗಗಳಾದ ಜಾಟ್, ಗುಜ್ಜಾರ್, ರಜಪೂತ್, ಬನಿಯಾ, ಬ್ರಾಹ್ಮಣ ಸಮುದಾಯಕ್ಕೆ ಅನುಕೂಲವಾಗಲಿದೆ. 

ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಈ ಮೀಸಲಾತಿಗೆ ಇರುವ ಕೆಲ ಷರತ್ತುಗಳು 
* ಶೇ.10ರಷ್ಟು ಮೀಸಲಾತಿ ಪಡೆಯಬೇಕಿದ್ದರೆ ಅವರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕೆಳಗಿರಬೇಕು. 
* 5 ಎಕರೆ ಭೂಮಿ, 1000 ಚದುರ ಅಡಿಗಿಂತ ಕಡಿಮೆ ವಿಸ್ತೀರ್ಣ  ಮನೆ ಹೊಂದಿರಬೇಕು.

click me!