
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2018 -19ನೇ ಸಾಲಿನ ರಾಜ್ಯ ಬಜೆಟ್ ಭಾನುವಾರದಿಂದ ಅನುಷ್ಠಾನಗೊಳ್ಳಲಿದ್ದು, ಬಜೆಟ್ ಘೋಷಣೆಯಂತೆ ಅಬಕಾರಿ ತೆರಿಗೆ ಶೇ.8ರಷ್ಟು ಏರಿಕೆ ಆಗಲಿದೆ.
ಈ ಹಿನ್ನೆಲೆಯಲ್ಲಿ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ. ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಒಂದೇ ಮಾದರಿ ತೆರಿಗೆ ವ್ಯವಸ್ಥೆ ಜಾರಿಯಾಗಿದೆ. ಹೀಗಾಗಿ ರಾಜ್ಯ ಬಜೆಟ್ ವ್ಯಾಪ್ತಿಗೆ ಹೆಚ್ಚು ತೆರಿಗೆ ಬರುವುದಿಲ್ಲ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಶೇ.8 ರಷ್ಟು ಏರಿಕೆ ಮಾಡಿ, ವೈಮಾನಿಕ ಇಂಧನ ಮಾರಾಟ ತೆರಿಗೆ ಶೇ.23ರಷ್ಟು ಇಳಿಕೆ ಮಾಡಲಾಗಿದೆ.
ಮೊದಲ ಸ್ಲ್ಯಾಬ್‌ಗಳಿಗೆ ಬರುವ ಮದ್ಯಗಳ ಬೆಲೆ ಹೆಚ್ಚಳ ಮಾಡಿಲ್ಲ. ಎರಡರಿಂದ 18ನೇ ಘೋಷಿತ ಬೆಲೆಯ ಸ್ಲ್ಯಾಬ್‌ವರೆಗಿನ ಮದ್ಯದ ದರ ಶೇ.8ರಷ್ಟು ಹೆಚ್ಚಳ ಆಗಲಿದೆ. ಮದ್ಯದ ಮೊದಲ ಸ್ಲ್ಯಾಬ್‌ಗಳಲ್ಲಿ (0-449) ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ವಿಸ್ಕಿ, ಬ್ರಾಂಡಿ, ರಮ್‌ನ ಬೆಲೆ ಕ್ವಾಟರ್‌ಗೆ 3 ರು.ಗಳಿಂದ 40-40 ರು. ಹೆಚ್ಚಳ ಆಗುವ ಸಾಧ್ಯತೆ ಇದೆ.
ದೇಶಿ ಮದ್ಯ ಹಾಗೂ ವಿದೇಶಿ ಮದ್ಯದ ಆಧಾರದ ಮೇಲೆ ದರ ಹೆಚ್ಚಾಗಲಿದ್ದು, ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ. ಜಿಎಸ್‌ಟಿ ನೋಂದಾಯಿತ ವೃತ್ತಿ ತೆರಿಗೆ ವಹಿವಾಟು ಮಿತಿ 2 ಲಕ್ಷ ರು.ಗಳಿಂದ 20 ಲಕ್ಷ ರು.ಗಳಿಗೆ ಹೆಚ್ಚಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.