ನಾಳೆಯಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಏರಿಕೆ

By Suvarna Web DeskFirst Published Mar 31, 2018, 1:57 PM IST
Highlights

ನಾಳೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಟೋಲ್ ಶುಲ್ಕವನ್ನು ಏರಿಕೆ ಬಿಸಿ ತಟ್ಟಲಿದೆ.  

ನವದೆಹಲಿ :  ನಾಳೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಟೋಲ್ ಶುಲ್ಕವನ್ನು ಏರಿಕೆ ಬಿಸಿ ತಟ್ಟಲಿದೆ.  

ಏಪ್ರಿಲ್ 1ರಿಂದ ನೂತನ ಶುಲ್ಕವು ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಇದುವರೆಗೆ ಇದ್ದ  ಶುಲ್ಕದ ಪ್ರಮಾಣದಲ್ಲಿ ಶೇ.5ರಿಂದ 7ರಷ್ಟು ಏರಿಕೆಯಾಗುತ್ತಿದೆ.  ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇದೇ ವೇಳೆ ಟೋಲ್ ದರದಲ್ಲಿಯೂ ಕೂಡ ಏರಿಕೆಯಾಗುತ್ತಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಬಜೆಟ್ ಮಂಡನೆ ಮಾಡಿದ್ದು,  ವೇಳೆ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಮಾಡಿತ್ತು. ಪ್ರತೀ ವರ್ಷವೂ ಕೂಡ ಆರ್ಥಿಕ ವರ್ಷ ಆರಂಭವಾಗುವ ಮುನ್ನ ಟೋಲ್ ದರದಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರದಲ್ಲಿ ಏರಿಕೆಯಾಗುತ್ತಿದೆ.

click me!