ಕುಂಭಮೇಳದಿಂದ 1.2 ಲಕ್ಷ ಕೋಟಿ ಆದಾಯ!

By Web DeskFirst Published Jan 21, 2019, 9:25 AM IST
Highlights

50 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭರ್ಜರಿ ವಹಿವಾಟು| ವಿವಿಧ ವಲಯಗಳ 6 ಲಕ್ಷ ಜನರಿಗೆ ಉದ್ಯೋಗಾವಕಾಶ| 50 ದಿನಗಳಲ್ಲಿ 12 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ

ಪ್ರಯಾಗ್‌ರಾಜ್‌[ಜ.21]: ಕಳೆದ ಜ.15ರಿಂದ ಚಾಲನೆ ಪಡೆದು ಮಾಚ್‌ 4ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಅರ್ಧಕುಂಭಮೇಳದಿಂದಾಗಿ ಉತ್ತರಪ್ರದೇಶ ರಾಜ್ಯದಲ್ಲಿ 1.2 ಲಕ್ಷ ಕೋಟಿ ರು.ನಷ್ಟುಭರ್ಜರಿ ಆದಾಯ ಹರಿದುಬರಲಿದೆ ಎಂದು ವರದಿಯೊಂದು ತಿಳಿಸಿದೆ. ಜೊತೆಗೆ 50 ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಮೇಳದಿಂದಾಗಿ ವಿವಿಧ ವಲಯಗಳ ಸುಮಾರು 6 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರಾ ಮೋದಿ?

ಭಾರತೀಯ ಕೈಗಾರಿಕಾ ಒಕ್ಕೂಟವಾದ ಸಿಐಐನ ವರದಿ ಅನ್ವಯ, ಈ ಬಾರಿಯ ಅರ್ಧಕುಂಭ ಮೇಳಕ್ಕೆ ರಾಜ್ಯ ಸರ್ಕಾರ 4200 ಕೋಟಿ ರು. ಅನುದಾನ ಒದಗಿಸಿದೆ. ಇದು 2013ರಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಮಾಡಲಾದ ಖರ್ಚಿಗಿಂತಲೂ ಮೂರುಪಟ್ಟು ಹೆಚ್ಚು. ಈ ಮೂಲಕ ಇತಿಹಾಸದಲ್ಲೇ ಅತ್ಯಂತ ದುಬಾರಿ ಅರ್ಧಕುಂಭ ಮೇಳ ಎಂಬ ದಾಖಲೆ ಸೃಷ್ಟಿಸಿದೆ.

ಕುಂಭಮೇಳ: ಭಕ್ತರ ಪುಣ್ಯಸ್ನಾನ ಕಂಡು ಗಡಗಡ ನಡುಗಿದ ಚಳಿ

ಈ ಧಾರ್ಮಿಕ ಮೇಳದಿಂದಾಗಿ ಹೋಟೆಲ್‌ ಸೇರಿದಂತೆ ಆತಿಥ್ಯ ವಲಯದಲ್ಲಿ 2.50 ಲಕ್ಷ, ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ 1.50 ಲಕ್ಷ, 45000 ಪ್ರವಾಸಿ ಆಪರೇಟರ್‌, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ವಲಯದಲ್ಲಿ 85000 ಜನರಿಗೆ ಉದ್ಯೋಗ ಸಿಗಲಿದೆ. ಇದಲ್ಲದೆ ಅಸಂಘಟಿತ ವಲಯದ 55000 ಜನ ಕೂಡಾ ವಿವಿಧ ರೀತಿಯ ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.

ಅಲಹಾಬಾದ್‌ ರೈಲು ನಿಲ್ದಾಣದಲ್ಲಿ ಇನ್ನು ಕನ್ನಡ!

ಈ ಹಿಂದಿನ ವರ್ಷಗಳಲ್ಲಿ 1600 ಹೆಕ್ಟೇರ್‌ ಪ್ರದೇಶದಲ್ಲಿ ಕುಂಭ ಮೇಳ ಆಯೋಜಿಸುತ್ತಿದ್ದರೆ, ಈ ಬಾರಿ 3200 ಹೆಕ್ಟೇರ್‌ ಪ್ರದೇಶದಲ್ಲಿ ಕುಂಭ ಮೇಳ ಆಯೋಜಿಸಲಾಗಿದೆ. ನಗರದಾದ್ಯಂತ 40000 ಹೊಸ ಎಲ್‌ಇಡಿ ಬಲ್‌್ಬ ಅಳವಡಿಸಲಾಗಿದೆ. 250 ಕಿ.ಮೀನಷ್ಟುಹೊಸ ರಸ್ತೆ, 22 ಪಾಂಟೂನ್‌ ಸೇತುವೆ ನಿರ್ಮಿಸಲಾಗಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ತಾತ್ಕಾಲಿಕ ನಗರಿ ನಿರ್ಮಾಣ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. 50 ದಿನಗಳ ಅವಧಿಯಲ್ಲಿ 12 ಕೋಟಿ ಜನ ಈ ಹಿಂದೆ ಅಲಹಾಬಾದ್‌ ಎಂದು ಕರೆಸಿಕೊಳ್ಳುತ್ತಿದ್ದ ಪ್ರಯಾಗ್‌ರಾಜ್‌ಗೆ ಆಗಮಿಸುವ ನಿರೀಕ್ಷೆ ಇದ್ದು, ರಾಜ್ಯಕ್ಕೆ 1.2 ಲಕ್ಷ ಕೋಟಿ ರು. ಆದಾಯ ಹರಿದುಬರಲಿದೆ ಎಂದು ವರದಿ ಹೇಳಿದೆ.

click me!