
ನವದೆಹಲಿ[ಜ.21]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ರುಮಾಲು ನಿಮಗೆ ಇಷ್ಟವಾಯಿತೇ? ಅವರಿಗೆ ಸನ್ಮಾನ ಮಾಡಿಸಿದಾಗ ಹಾಕಿದ ಶಾಲು ಮತ್ತು ಪೇಂಟಿಂಗ್ ನಿಮಗೆ ಹಿಡಿಸಿತೇ? ಹಾಗಿದ್ದರೆ ಅವು ಶೀಘ್ರದಲ್ಲೇ ನಿಮ್ಮ ವಸ್ತುಗಳಾಗಬಹುದು.
ಹೌದು. ಮೋದಿ ಅವರಿಗೆ ಕಾಣಿಕೆಯಾಗಿ ನೀಡಲಾದ ವಸ್ತುಗಳು ಈಗ ರಾಷ್ಟ್ರೀಯ ಆಧುನಿಕ ಕಲಾ ವಸ್ತುಸಂಗ್ರಹಾಲಯದಲ್ಲಿ ಇದ್ದು, ಅವುಗಳನ್ನು ಶೀಘ್ರ ಹರಾಜು ಹಾಕಲಾಗುತ್ತದೆ. ಬಂದ ಹಣವನ್ನು ಗಂಗಾ ನದಿ ಸ್ವಚ್ಛತೆಯ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ ಶರ್ಮಾ ಹೇಳಿದ್ದಾರೆ.
ಮೋದಿ ಅವರಿಗೆ 1800 ವಸ್ತುಗಳು ಬಂದಿವೆ. ಇವುಗಳಲ್ಲಿ ಪೇಂಟಿಂಗ್, ಛಾಯಾಚಿತ್ರಗಳು, ಪೇಟ (ರುಮಾಲು-ಪಗಡಿ), ಶಾಲು, ಶಿಲ್ಪಕಲಾಕೃತಿಗಳು ಹಾಗೂ ಇತರ ಕಾಣಿಕೆಗಳು ಇವೆ.
ವಸ್ತುಸಂಗ್ರಹಾಲಯದ ಸ್ಥಳದಲ್ಲಿ 2 ದಿನ ಹಾಗೂ ಇ-ಹರಾಜಿನ ಮೂಲಕ 3 ದಿನ ಹರಾಜು ನಡೆಯಲಿದೆ. ಮುಂದಿನ 10-15 ದಿನದಲ್ಲಿ ಇದು ನಡೆಯಬಹುದು. ಬಹುತೇಕ ವಸ್ತುಗಳ ಮೂಲಬೆಲೆಯನ್ನು 500 ರು.ಗೆ ನಿಗದಿ ಮಾಡಲಾಗಿದೆ. ಹರಾಜು ಕುರಿತ ವೆಬ್‌ಸೈಟ್‌ಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ