ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

Published : Aug 17, 2018, 05:40 PM ISTUpdated : Sep 09, 2018, 09:44 PM IST
ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

ಸಾರಾಂಶ

ಕೇರಳದಲ್ಲಿ ನಿರಂತರವಾಗಿ ಮಳೆ ಆರ್ಭಟ ಮುಂದುವರಿದಿದ್ದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಮಾಹಿತಿ ಪಡೆದಿದ್ದು ಕೇರಳಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

ನವದೆಹಲಿ[ಆ.17] ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಟ್ವೀಟ್ ಮಾಡಿರುವ ನರೇಂದ್ರ ಮೋದಿ ಕೇರಳಕ್ಕೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ನಾಣು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸಕಲ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಅಲ್ಲದೆ ತಾವೇ ಖುದ್ದು ಕೇರಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

ಕೇರಳದ ಮಹಾಮಳೆಯಲ್ಲಿ ಮುಳುಗಿದ ರಾಜ್ಯದ ಐರಾವತ

ಮಳೆ ಆರ್ಭಟಕ್ಕೆ ಇಲ್ಲಿಯವರೆಗೆ ಕೇರಳದಲ್ಲಿ 167 ಜನ ಬಲಿಯಾಗಿದ್ದಾರೆ. ನೆರೆಪೀಡಿತ ಪಟ್ಟಣಮ್ ತಿಟ್ಟಕ್ಕೆ ರಕ್ಷಣಾ ಕಾರ್ಯಾಚರಣೆಗೆ 10 ಬೋಟ್ ಗಳನ್ನು ರವಾನಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ನ 540 ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ತಿರುವನಂತಪುರ, ಎರ್ನಾಕುಲಂ, ಕೊಲ್ಲಮ್ ಮತ್ತು ಆಲಪ್ಪುಳ ಜಿಲ್ಲೆಗಳ  ಮೀನುಗಾರರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕೇರಳದ ನೆರವಿಗೆ ನೀವು ಧಾವಿಸಬಹುದು:
ಕೇರಳ ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡ ಸಂತ್ರಸ್ತರಿಗೆ ಏಷ್ಯಾನೆಟ್ ನ್ಯೂಸ್ ಚಾರಿಟೇಬಲ್ ಸಂಸ್ಥೆಯೊಂದನ್ನು ಆರಂಭಿಸಿದ್ದು ನೆರವಿಗೆ ಸರಕಾರವೊಂದೇ ಅಲ್ಲ. ನೀವು ಧಾವಿಸಬಹುದು. ತಿರುವನಂತಪುರಮ್‌ನ ಕಾರ್ಪೋರೇಷನ್ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಿ ನೊಂದವರ ಕಣ್ಣೀರು ಒರೆಸಲು ನೆರವಾಗಬಹುದು.

ಏಷಿಯಾನೆಟ್ ನ್ಯೂಸ್ ಚಾರಿಟೇಬಲ್ ಟ್ರಸ್ಟ್
ಕಾರ್ಪೋರೇಶನ್ ಬ್ಯಾಂಕ್ ತಿರುವನಂತಪುರಂ ಮುಖ್ಯಶಾಖೆ

ಐಎಫ್ ಎಸ್‌ ಸಿ ಕೋಡ್: ಸಿಒಆರ್‌ಪಿ0000070
ಖಾತೆ ಸಂಖ್ಯೆ:  510331001274314

Asianet News Charitable Trust
Corporation Bank Thiruvananthapuram Main Branch
IFSC CORP0000070
AC No.510331001274314

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!