
ಮಹಾನ್ ನಾಯಕರು ನಿಧನರಾದಾಗ ಪತ್ರಿಕೆಯೊಂದರ ಮುಖಪುಟ ಮತ್ತು ತಲೆಬರಹ ರೂಪಿಸುವುದು ಸುಲಭದ ಕೆಲಸವಲ್ಲ. ಭರಪೂರ ಮಾಹಿತಿಗಳು ಒಂದು ಕಡೆ, ನಿಧನರಾದ ವ್ಯಕ್ತಿಯ ಬೃಹತ್ ಸಾಧನೆ ಇನ್ನೊಂದು ಕಡೆ... ಒಟ್ಟಿನಲ್ಲಿ ಎಲ್ಲರಿಗೂ ಒಪ್ಪುವ, ಮೆಚ್ಚುವ ಮತ್ತೆ ಸದಾ ನೆನಪಿನಲ್ಲಿ ಉಳಿಯುವಂತಹ ಹೆಡ್ ಲೈನ್ ನೀಡುವುದು ಕಷ್ಟ ಸಾಧ್ಯವಾದ ಕೆಲಸ.
ವಾಜಪೇಯಿ ಅವರ ನಿಧನದ ಸುದ್ದಿ ಅದಾಗಲೇ ಎಲ್ಲ ಕಡೆ ಬಿತ್ತರವಾಗಿದ್ದರೆ ಪತ್ರಿಕೆಗಳಿಗೆ ನಾಳಿನ ಹೆಡ್ ಲೈನ್ ನೀಡುವ ಯೋಚನೆ, ಆಲೋಚನೆ, ಚಿಂತನೆ ಎಲ್ಲವೂ ಒಂದೇ ಸಂದರ್ಭದಲ್ಲಿ ಎದುರಾಗಿದ್ದು. ಹಿಂದೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ಸಾಧನೆ ಮಾಡಿದಾಗಲೂ ಇಂಥದ್ದೆ ಚರ್ಚೆ ನಡೆದಿತ್ತು. ಅಬ್ದುಲ್ ಕಲಾಂ ನಿಧನ, ಜಯಲಲಿತಾ ನಿಧನ, ಕರುಣಾನಿಧಿ ನಿಧನದ ವೇಳೆಯೂ ತಲೆಬರಹಕ್ಕೆ ಹುಡುಕಾಟ ನಡೆದಿತ್ತು.
ಈ ತಲೆಬರಹಗಳು ಎಷ್ಟೇ ಆಲೋಚನೆ ಮಾಡಿದರೂ ಹೊಳೆಯುವುದಿಲ್ಲ. ಮಾತನಾಡುತ್ತ-ಮಾತನಾಡುತ್ತ ಇರುವಾಗ ಒಂದು ಅದ್ಭುತ ತಲೆಬರಹ ಹೊಳೆದು ಬಿಡಬಹುದು. ಎರಡನೇ ಸಾಧ್ಯತೆಯೇ ಹಲವಾರು ಸಂದರ್ಭದಲ್ಲಿ ಯಶಸ್ವಿಯಾಗಿದ್ದನ್ನು ನೋಡಿದ್ದೇವೆ. ಹಾಗಾದರೆ ಕನ್ನಡದ ಪ್ರಮುಖ ದಿನಪತ್ರಿಕೆಗಳು ಅಟಲ್ ಗೆ ಯಾವ ಬಗೆಯಾಗಿ ಅಂತಿಮ ನಮನ ಸಲ್ಲಿಕೆ ಮಾಡಿದವು.. ನೀವೇ ನೋಡಿ
ಕನ್ನಡಪ್ರಭ
ಉದಯವಾಣಿ
ವಿಜಯ ಕರ್ನಾಟಕ
ವಿಜಯವಾಣಿ
ವಿಶ್ವವಾಣಿ
ಪ್ರಜಾವಾಣಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.