ಕಾಶ್ಮೀರಿ ಯುವಕರ ಮೇಲೆ ಹಲ್ಲೆ: ಮೋದಿ ಮಾತಿಗೆ ಕಿಮ್ಮತ್ತಿಲ್ವೆ?

By Web DeskFirst Published Mar 7, 2019, 2:38 PM IST
Highlights

ಪುಲ್ವಾಮಾ ದಾಳಿ ಬಳಿಕ ಹೆಚ್ಚಿದ ಕಾಶ್ಮೀರಿ ಯುವಕರ ಮೇಲಿನ ಹಲ್ಲೆ| ಲಕ್ನೋದಲ್ಲಿ ಇಬ್ಬರು ಕಾಶ್ಮೀರಿ ಯುವಕರ ಮೇಲೆ ಗುಂಪು ಹಲ್ಲೆ| ಹಣ್ಣು ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ಯುವಕರಿಗೆ ಥಳಿತ| ಕಾಶ್ಮೀರಿ ವ್ಯಾಪಾರಿಗಳನ್ನು ರಕ್ಷಿಸಿದ ಸ್ಥಳೀಯರು| 

ಲಕ್ನೋ(ಮಾ.07): ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ದೇಶದೆಲ್ಲೆಡೆ ಕಾಶ್ಮೀರಿ ಯುವಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಇಬ್ಬರು ಕಾಶ್ಮೀರಿ ವ್ಯಾಪಾರಿಗಳ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಡೆದಿದೆ.

ಬುಧವಾರ ಸಂಜೆ ನಡೆದ ಘಟನೆಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ಯುವಕರಿಬ್ಬರ ಮೇಲೆ ಗುಂಪಂದು ಹಲ್ಲೆ ಮಾಡಿದೆ. ಗುಂಪಿನಲ್ಲಿದ್ದವರು ಕೇಸರಿ ಬಟ್ಟೆಗಳನ್ನು ಧರಿಸಿದ್ದು, ಕಾಶ್ಮೀರಿ ವ್ಯಾಪಾರಿಗಳಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

SHOCKING: Some goons in saffron kurtas throttle, assault a Kashmiri dry fruit seller in Lucknow. Passersby come to rescue of the Kashmiri. Case yet to be registered.

Hope register an FIR and jab these goondas at the earliest. pic.twitter.com/zXjI3Anh2n

— Prashant Kumar (@scribe_prashant)

ಆದರೆ ಸ್ಥಳೀಯರು ಕಾಶ್ಮೀರಿ ಯುವಕರನ್ನು ರಕ್ಷಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

click me!