ಕೈ ಶಾಸಕನ ಮನೆಗೆ ಶಿವನಗೌಡ, ಕಾರ್ಯಕರ್ತರ ಹೊರಕಳಿಸಿ ಗೌಪ್ಯ ಮಾತುಕತೆ

Published : Mar 07, 2019, 07:55 PM ISTUpdated : Mar 07, 2019, 08:07 PM IST
ಕೈ ಶಾಸಕನ ಮನೆಗೆ ಶಿವನಗೌಡ, ಕಾರ್ಯಕರ್ತರ ಹೊರಕಳಿಸಿ ಗೌಪ್ಯ ಮಾತುಕತೆ

ಸಾರಾಂಶ

ಡಾ. ಉಮೇಶ್ ಜಾಧವ್ ರಾಜೀನಾಮೆ ನಂತರ ಮತ್ತೆ ಆಪರೇಶನ್ ಕಮಲದ ವಾಸನೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಶನ್ ಕಲಮದ ವಿಚಾರ ಮಾತನಾಡಲು ಆರಂಭಿಸಿದೆ.

ರಾಯಚೂರು[ಮಾ. 07]   ಇನ್ನು ನಡೆಯುತ್ತಿದಿಯಾ ಬಿಜೆಪಿ  ಆಪರೇಷನ್ ಕಮಲ? ಎಂಬ ಪ್ರಶ್ನೆ ಉದ್ಭವಿಸುವ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ಮನೆಗೆ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ನಿವಾಸದಲ್ಲಿ ಗೌಪ್ಯ ಮಾತುಕತೆ ನಡೆದಿದೆ. ಕಾರ್ಯಕರ್ತರನ್ನು ಮನೆಯಿಂದ ಹೊರಗಡೆ ಕಳುಹಿಸಿ ಶಾಸಕರಿಬ್ಬರು ಮಾತುಕತೆ ನಡೆಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆದಿದೆ.

ಕಲಬುರಗಿಗೆ ಬಂದು ಖರ್ಗೆ ಬಗ್ಗೆ ಚಕಾರವೆತ್ತದ ಮೋದಿ; ಕಾರಣ ನೋಡಿ!

ಈ ಹಿಂದೆ ದೇವದುರ್ಗ ಐಬಿ ಯಲ್ಲಿ ಶಿವನಗೌಡ ನಾಯಕ್ ಇದ್ದರು ಎನ್ನಲಾದ ಆಪರೇಷನ್ ಕಮಲ ಆಡಿಯೋ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಶಾಸಕರಿಬ್ಬರ ದಿಢೀರ್ ಭೇಟಿಯಿಂದ ಕಾರ್ಯಕರ್ತರಲ್ಲಿ ಆಪರೇಷನ್ ಕಮಲದ ಅನುಮಾನ ಸಹಜವಾಗಿಯೇ ಮೂಡಿದೆ.


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!
ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್