
ಹಾಸನ (ಅ. 01): ಲೋಕೋಪಯೋಗಿ ಇಲಾಖೆಯಲ್ಲಿ 700 ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಸಚಿವ ಹೆಚ್,ಡಿ,ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ವರ್ಗಾವಣೆಯಲ್ಲಿ ನನ್ನದೇನೋ ಪಾತ್ರವಿಲ್ಲ. ಖಾಲಿ ಇರುವ ಜಾಗಕ್ಕೆ ಹುದ್ದೆ ನೀಡಲೇಬೇಕು. ನಿವೃತ್ತಿ ನಂತರ ತೆರವಾಗಿರುವ ಜಾಗಕ್ಕೆ ವರ್ಗ ಮಾಡದಿದ್ದರೆ ಕೆಲಸ ಹೇಗೆ ಆಗುತ್ತೆ? ವರ್ಗಾವಣೆಯಲ್ಲಿ ಯಾವುದೇ ದಂಧೆ ಇಲ್ಲ ಎಂದಿದ್ದಾರೆ. ಎಲ್ಲಾ ಇಲಾಖೆಗೂ ಕೆಲವು ಇಂಜಿನಿಯರ್ ಗಳನ್ನ ವರ್ಗಾವಣೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಬಿಜೆಪಿ ಆರೋಪ ಉತ್ತರ ನೀಡುತ್ತಾ, ಯಾರಿಗೆ ಬೇಕಾದರೂ ದಾಖಲೆ ನೀಡುತ್ತೇನೆ ಪರಿಶೀಲನೆ ಮಾಡಲಿ. ಬಿಜೆಪಿ ಮಾತು ಕೇಳಿದ್ರೆ ಮಣ್ಣು ಹಾಕಬೇಕಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.