ಇಬ್ಬರು ಮಹಿಳಾ ಪೇದೆಯ ಮುದ್ದಿನ ಪಿಸಿ ಆತ್ಮಹತ್ಯೆ

Published : Oct 01, 2018, 01:48 PM IST
ಇಬ್ಬರು ಮಹಿಳಾ ಪೇದೆಯ ಮುದ್ದಿನ ಪಿಸಿ ಆತ್ಮಹತ್ಯೆ

ಸಾರಾಂಶ

ಸಂಸಾರಿಯಾಗಿದ್ದರೂ ಇಬ್ಬರು ಸಹೋದ್ಯೋಗಿಗಳೊಂದಿಗಿತ್ತು ಈ ಪೇದೆಗೆ ಸಂಬಂಧ. ಇದನ್ನರಿತ ಹಿರಿಯ ಅಧಿಕಾರಿಗಳು ಮೂವರನ್ನೂ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಿದ್ದರು. ಆದರೂ, ಇಬ್ಬರು ಮಹಿಳೆಯರೊಂದಿಗೂ ಸಂಪರ್ಕ ಮುಂದುವರಿಸಿದ್ದ ಪೇದೆಗೆ ಮದುವೆಯಾಗುವಂತೆ ಒತ್ತಡವೂ ಇತ್ತು. ಈ ಎಲ್ಲವಕ್ಕೂ ಬೇಸತ್ತು ಪೇದೆ ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ.

ಕೊಲ್ಹಾಪುರ (ಅ.1): ಸಹೋದ್ಯೋಗಿಗಳ ಕಿರುಕುಳದಿಂದ ಮಹಿಳಾ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿದ್ದೇವೆ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಮದುವೆಯಾಗಲು ಮಹಿಳಾ ಸಹೋದ್ಯೋಗಿಗಳು ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಇಬ್ಬರೂ ಮಹಿಳಾ ಪೇದೆಗಳೊಂದಿಗೆ ಪೇದೆಗೆ ದೈಹಿಕ ಸಂಬಂಧವೂ ಇತ್ತು. ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಈ ಹಿಂಸೆ ತಾಳಲಾರದೇ 42 ವರ್ಷದ ಪೇದೆ ವಿಷ ಸೇವಿಸಿ, ಸಾವಿಗೆ ಶರಣಾಗಿದ್ದಾರೆ. 

ಮೃತ ಪೇದೆ ಪತ್ನಿ ರಾಜರಾಮ್‌ಪುರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, 'ಪತಿಯೊಂದಿಗೆ ಇಬ್ಬರು ಮಾಹಿಳಾ ಪೇದೆಗಳು ಗಾಂಧಿನಗರ ಠಾಣೆಯಲ್ಲಿ 2012ರಿಂದ 2014ರವರೆಗೆ ಒಟ್ಟಿಗೇ ಕಾರ್ಯ ನಿರ್ಹಹಿಸುತ್ತಿದ್ದರು. ಯಾವಾಗ ಹಿರಿಯ ಅಧಿಕಾರಿಗಳಿಗೆ ಈ ಇಬ್ಬರು ಮಹಿಳಾ ಪೇದೆಗಳೊಂದಿಗೆ ಪತಿಗೆ ಸಂಬಂಧವಿರುವುದು ಗೊತ್ತಾಯಿತೋ, ಆಗಲೇ ಮೂವರನ್ನೂ ಬೇರೆ ಬೇರೆ ಸ್ಥಳಗಳಿಗೆ ವರ್ಗಾಯಿಸಿದ್ದರು. ವರ್ಗವಾದರೂ ಪತಿಯೊಂದಿಗೆ ಈ ಮಹಿಳೆಯರು ಸಂಪರ್ಕ ಇರಿಸಿಕೊಂಡಿದ್ದರು. ಸಂಬಂಧ ಮುಂದುವರಿಸುವಂತೆ, ಮದುವೆಯಾಗುವಂತೆ ಇಬ್ಬರೂ ದುಂಬಾಲು ಬಿದ್ದಿದ್ದರು. ಅಲ್ಲದೇ ವಿಚ್ಚೇದನ ನೀಡುವಂತೆ ಪೇದೆ ಪತ್ನಿಗೂ ಬೆದರಿಕೆ ಒಡ್ಡಿದ್ದರು. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಪೇದೆ ವಿಷ ಸೇವಿಸಿ, ಸಾವಿಗೆ ಶರಣಾಗಿದ್ದಾರೆ,' ಎಂದು ಹೇಳಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಇಬ್ಬರು ಮಹಿಳಾ ಪೇದೆಗಳ ವಿರುದ್ಧ ಪ್ರರಣ ದಾಖಲಿಸಾಲಾಗಿದೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!