ರಾಜ್ಯದಲ್ಲೇ ಅಪರೂಪದ ಫಲಿತಾಂಶ; ಎಲ್ಲಾ ವಾರ್ಡ್‌ಗಳಲ್ಲಿ ಪಕ್ಷೇತರರಿಗೆ ಗೆಲ್ಲಿಸಿದ ಪುರಸಭೆ!

By Web Desk  |  First Published Sep 3, 2018, 9:42 AM IST
  • ಎಲ್ಲಾ ಸ್ಥಾನಗಳಲ್ಲೂ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿದ ಪುರಸಭೆ!
  • 17 ಸ್ಥಾನಗಳಲ್ಲೂ ಪಕ್ಷೇತರರನ್ನು ಗೆಲ್ಲಿಸಿದ ಪುರಸಭೆ!
  • ಕೊಣ್ಣೂರು ಪುರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್,ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ

ಬೆಂಗಳೂರು: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತಿವೆ. ಬಹುತೇಕ  ಎಲ್ಲಾ ಕಡೆ ರಾಷ್ಟ್ರೀಯ ಪಕ್ಷಗಳ ಭರಾಟೆಯಾದರೆ, ಬೆಳಗಾವಿ ಜಿಲ್ಲೆಯ ಪುರಸಭೆಯೊಂದರಲ್ಲಿ ಮತದಾರರು ಮುಖ್ಯವಾಹಿನಿ ಪಕ್ಷಗಳನ್ನು ಮನೆಗೆ ಕಳುಹಿಸಿದ್ದಾರೆ.  

ಹೌದು, ಬೆಳಗಾವಿ ಜಿಲ್ಲೆಯ ಕೊಣ್ಣೂರು ಪುರಸಭೆಯಲ್ಲಿ 17 ಸ್ಥಾನಗಳಲ್ಲಿ ಪಕ್ಷೇತರರೇ ಪ್ರತಾಪ ಮೆರೆದಿದ್ದಾರೆ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರಿಗೂ ಒಂದು ಸ್ಥಾನವೂ ನೀಡದೇ ಪಕ್ಷೇತರರಿಗೆ ಪುರಸಭೆಯ ಚುಕ್ಕಾಣಿ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್, ಬಿಜೆಪಿ, ಜೆಡಿಎಸ್,ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎಂಬುವುದನ್ನು ಮತದಾರರು ಸಾಬೀತುಪಡಿಸಿದ್ದಾರೆ! 

Tap to resize

Latest Videos

ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಮೂರೂ ಪಕ್ಷಗಳಿಗೆ ಲೋಕಲ್ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯಾಗಿದ್ದು, ಮಧ್ಯಾಹ್ನದ ವೇಳೆಗೆ ರಾಜ್ಯಾದ್ಯಂತ ಎಲ್ಲಾ ಅಭ್ಯರ್ಥಿಗಳ ಭವಿಷ್ಯದ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

click me!