‘ಪರಮೇಶ್ವರ್, ಡಿಕೆಶಿ ಜೆಡಿಎಸ್ ವಕ್ತಾರರು’

By Web DeskFirst Published Sep 3, 2018, 9:38 AM IST
Highlights

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲ ಸಂಪನ್ಮೂಲ ಸಚಿವ ಡಿ. ಕೆ.ಶಿವಕುಮಾರ್ ಅವರು ಜೆಡಿಎಸ್ ವಕ್ತಾರರಾಗಿ ಇರುವಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. 
 

ದಾವಣಗೆರೆ: ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನ ಮಾನ ನೀಡಿದ್ದಕ್ಕಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಜಲ ಸಂಪನ್ಮೂಲ ಸಚಿವ ಡಿ. ಕೆ.ಶಿವಕುಮಾರ್ ಅವರು ಜೆಡಿಎಸ್ ವಕ್ತಾರರಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. 

ಸಿದ್ದರಾಮಯ್ಯ ಸರ್ಕಾರದಲ್ಲಿ ಡಾ.ಜಿ.ಪರಮೇ ಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವ ಸ್ಥಾನ ನೀಡಿರಲಿಲ್ಲ. ಧರಂಸಿಂಗ್ ಮುಖ್ಯಮಂತ್ರಿಯಾಗಿ ದ್ದಾಗ ಡಿ.ಕೆ.ಶಿವಕುಮಾರಗೆ ಸಚಿವ ಸ್ಥಾನ ನೀಡಿರಲಿಲ್ಲ. 

ದೇವೇಗೌಡರ ಆಶೀರ್ವಾದ, ಕುಮಾರಸ್ವಾಮಿ ಕೃಪೆಯಿಂದ ಈಗ ಇಬ್ಬರಿಗೂ ಸ್ಥಾನಮಾನ ಸಿಕ್ಕಿದ್ದರಿಂದ ಅದರ ಋಣ ತೀರಿಸಲು ಜೆಡಿಎಸ್ ವಕ್ತಾರರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್ ಟೀಕಿಸಿದರು. ಪರಮೇಶ್ವರ್‌ಗೆ ಅಧಿಕಾರ ಬೇಕು. ಡಿ.ಕೆ.ಶಿವಕುಮಾರಗೆ ಸಚಿವ ಸ್ಥಾನ ಬೇಕು. ಇಬ್ಬರಿಗೂ ದೇವೇಗೌಡರ ಶ್ರೀರಕ್ಷೆ ಇದ್ದು, ಈ ಕಾರಣಕ್ಕೆ ಡಿಸಿಎಂ, ಸಚಿವರಾಗಿದ್ದಾರೆ. 

ಪರಮೇಶ್ವರ ಬಹಳ ವರ್ಷಗಳ ನಂತರ ಡಿಸಿಎಂ ಆಗಿದ್ದಾರೆ. ಹೊರಗಡೆ ಜೆಡಿಎಸ್ ವಕ್ತಾರರಂತೆ ವರ್ತಿಸಿದರೂ, ಒಳಗೊಳಗೇ ಜೆಡಿಎಸ್ ವಿರುದ್ಧವಿದ್ದಾರೆ ಎಂದರು. ಓಟು ಬ್ಯಾಂಕ್ ಪಾಲಿಟಿಕ್ಸ್‌ನಿಂದ ಕಾಂಗ್ರೆಸ್ಸಿ ನವರು ದೇಶವನ್ನೇ ಹಾಳು ಮಾಡಿದ್ದಾರೆ ಎಂದರು.

click me!