ಗಣೇಶ ಹಬ್ಬಕ್ಕೆ ಷರತ್ತುಬದ್ಧ ಅನುಮತಿ, ವರ್ಮಾ ಕಪಾಳಕ್ಕೆ ಹೊಡೆದ ನಟಿ; ಸೆ.4ರ ಟಾಪ್ 10 ಸುದ್ದಿ!

By Suvarna NewsFirst Published Sep 5, 2021, 5:11 PM IST
Highlights

ಸಿಎಂ ಬಸವರಾಜ ಬೊಮ್ಮಾಯಿ ಗಣೇಶ ಹಬ್ಬಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.ಬೆಂಗಳೂರಿನಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ ಅನ್ನೋದು ಸಮೀಕ್ಷೆಯಿಂದ ಬಹಿರಂಗವಾಗಿದೆ. 700ಕ್ಕೂ ಹೆಚ್ಚು ತಾಲಿಬಾನಿಯರ ಹತ್ಯೆಗೈದ ಪಂಜಶೀರ್ ಕಮಾಂಡೋ. ರಾಮ್ ಗೋಪಾಲ್ ವರ್ಮಾಗೆ ಕಪಾಳಕ್ಕೆ ಹೊಡೆದ ನಟಿ, ಪಾಂಚಜನ್ಯ ಆರೋಪಕ್ಕೆ ಸಂಬಂಧವಿಲ್ಲ ಎಂದ ಆರ್‌ಎಸ್ಎಸ್ ಸೇರಿದಂತೆ ಸೆಪ್ಟೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಬರೋಬ್ಬರಿ 107 ಭಾಷೆ; ದೇಶದ ಅತ್ಯಂತ ಭಾಷಾ ವೈವಿಧ್ಯ ಜಿಲ್ಲೆ ಬೆಂಗಳೂರು!

ಇತ್ತೀಚೆಗೆ ಬಿಡುಗಡೆಯಾದ ಸಮೀಕ್ಷಾ ಅಧ್ಯಯನ ವರದಿ ಪ್ರಕಾರ ಬೆಂಗಳೂರಿನಲ್ಲಿ 107 ಭಾಷೆ ನೆಲೆನೆಂತಿದೆ. ದೇಶದಲ್ಲಿ ಅತೀ ಹೆಚ್ಚು ಭಾಷಾವಾರು ವೈವಿಧ್ಯತೆ ಹೊಂದಿರುವ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ನಮ್ಮ ಬೆಂಗಳೂರು ಪಾತ್ರವಾಗಿದೆ.

700ಕ್ಕೂ ಹೆಚ್ಚು ತಾಲಿಬಾನಿಯರ ಹತ್ಯೆ, 600ಕ್ಕೂ ಅಧಿಕ ಉಗ್ರರ ಸೆರೆ ಹಿಡಿದ ಪಂಜ್‌ಶೀರ್ ಯೋಧರು!

ಅಪ್ಘಾನಿಸ್ತಾನ ವಶಪಡಿಸಿಕೊಂಡಿರುವ ತಾಲಿಬಾನಿಯರಿಗೆ ಇಲ್ಲಿನ ಕಣಿವೆ ನಾಡು ಪಂಜ್‌ಶೀರ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪುಟ್ಟ ಪ್ರಾಂತ್ಯ ತಾಲಿಬಾನಿಯರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಹೇಗಾದರೂ ಮಾಡಿ ಪಂಜ್‌ಶೀರ್ ಹರಸಾಹಸ ಪಡುತ್ತಿರುವ ತಾಲಿಬಾನ್ ಉಗ್ರರು ಪಂಜ್‌ಶೀರ್ ಯೋಧರ ವಿರುದ್ಧ ಯುದ್ಧ ಸಾರಿದ್ದಾರೆ. 

ರೈತರ ಮಕ್ಕಳ ಶಿಷ್ಯ ವೇತನಕ್ಕೆ ಇಂದು ಚಾಲನೆ : ಯಾರಿಗೆ ಎಷ್ಟು ?

ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.

ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್: ಪ್ಯಾರಾಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ!

 ಎಸ್‌ಎಲ್‌4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್‌ ಯತಿರಾಜ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ

ಬೆಂಗ​ಳೂ​ರಲ್ಲಿ 7 ಕೋಟಿ ಮೌಲ್ಯದ ಫ್ಲ್ಯಾಟ್‌ ಖರೀ​ದಿಸಿದ ದೀಪಿಕಾ

ನಟಿ ದೀಪಿಕಾ ಪಡುಕೋಣೆ ಮತ್ತು ಅವರ ತಂದೆ, ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ ಬೆಂಗಳೂರಿನ ಬಳ್ಳಾರಿ ರಸ್ತೆ​ಯ​ಲ್ಲಿ​ರು​ವ ಗಂಗಾನಗರದಲ್ಲಿ ದುಬಾರಿ ಬೆಲೆಯ ಫ್ಲಾಟ್‌ ಖರೀದಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ: ಇಲ್ಲಿದೆ ಮಾರ್ಗಸೂಚಿ

ಕೊರೋನಾ ಮಧ್ಯೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಿದೆ.

ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಕಳೆದುಕೊಂಡ ಠೇವಣಿದಾರರಿಗೆ ಗುಡ್ ನ್ಯೂಸ್

ಹನ್ನೊಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 923 ಕೋಟಿ ರು.  ನಷ್ಟು ಅಕ್ರಮ ನಡೆದಿದ್ದು, ಇದೀಗ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ.  

ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಕಪಾಳಕ್ಕೆ ಹೊಡೆದ ನಟಿ?

ಟಾಲಿವುಡ್ ಕಾಂಟ್ರೋವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಟೇಲ್‌ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದ ನಟಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ.  ತಕ್ಷಣವೇ ಆ ಹುಡುಗಿ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಯಾರು ಆ ಹುಡುಗಿ, ಆರ್‌ಜಿವಿ ಏನು ಕಾಮೆಂಟ್ ಮಾಡಿದ್ದರು? 

Infosys ವಿರುದ್ಧ ಪಾಂಚಜನ್ಯ ಗಂಭೀರ ಆರೋಪ: ನಮಗೂ ಇದಕ್ಕೂ ಸಂಬಂಧವಿಲ್ಲ ಎಂದ RSS!

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪಾಂಚಜನ್ಯ ಇನ್ಫೋಸಿಸ್ ವಿರುದ್ಧ ಮಾಡಿದ್ದ ಆರೋಪವನ್ನು ಅಲ್ಲಗಳೆಯುತ್ತಾ, ಈ ಸಾಪ್ತಾಹಿಕ ತನ್ನ ಮುಖವಾಣಿಯಲ್ಲ ಎಂದಿದೆ. ಈ ನಿಟ್ಟಿನಲ್ಲಿ ಪ್ರಕಟವಾದ ಲೇಖನಗಳು ಲೇಖಕರ ಅಭಿಪ್ರಾಯವಾಗಿದ್ದು, ಇದಕ್ಕೂ RSSಗೂ ಸಂಬಂಧ ಕಲ್ಪಿಸಬೇಡಿ ಎಂದಿದೆ. ಇಷ್ಟೇ ಅಲ್ಲದೇ, ಭಾರತೀಯ ಕಂಪನಿಯಾಗಿರುವ ಇನ್ಫೋಸಿಸ್ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ ಎಂದೂ ಹೇಳಿದೆ.

click me!