
1) 3 ಡಿಸಿಎಂಗಳನ್ನ ಕೈಬಿಡುವುದು ಒಳ್ಳೆಯದು ಎಂದು ಸಲಹೆ ಕೊಟ್ಟ ಬಿಜೆಪಿ ನಾಯಕ
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೆರೆ ಪರಿಹಾರ ವಿಚಾರವಾಗಿ ಸ್ವಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡು ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಹೇಳಿಕೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
2) ಮಹಿಳಾ ದೌರ್ಜನ್ಯದ ಕೇಸ್ 21 ದಿನದಲ್ಲಿ ಇತ್ಯರ್ಥ: ಆಂಧ್ರದಲ್ಲಿ ಹೊಸ ಕಾಯ್ದೆ
ಹೈದರಾಬಾದ್‌ನ ದಿಶಾ, ಉತ್ತರ ಪ್ರದೇಶದ ಉನ್ನಾವ್ ಸೇರಿದಂತೆ ದೇಶಾದ್ಯಂತ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ, ಇಂಥ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
3) ಎನ್‌ಕೌಂಟರ್ ಪೊಲೀಸರಿಗೆ ಸಂಕಷ್ಟ: ತನಿಖೆಗೆ ಸುಪ್ರೀಂ ಸಮ್ಮತಿ!
ದಿಶಾ ಹತ್ಯಾಚಾರಿಗಳ ಎನ್’ಕೌಂಟರ್ ಮಾಡಿದ್ದ ಸೈಬರಾಬಾದ್ ಪೊಲೀಸರಿಗೆ ಇದೀಗ ಕಾನೂನು ಸಂಕಷ್ಟ ಶುರುವಾಗಿದೆ. ನಾಲ್ವರು ಅತ್ಯಾಚಾರ ಆರೋಪಿಗಳ ಎನ್’ಕೌಂಟರ್ ಕುರಿತು ಸ್ವತಂತ್ರ್ಯ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.
4) 'ಮುಸ್ಲಿಮರಿಗೆ ಮುಸ್ಲಿಂ ರಾಷ್ಟ್ರಗಳಿವೆ, ಹಿಂದೂಗಳೆಲ್ಲಿ ಹೋಗಬೇಕು'..?
ತಿದ್ದುಪಡಿ ಮಸೂದೆ ತಂದಿರುವುದು ಸರಿಯಾಗಿದೆ. ಬಾಂಗ್ಲಾ ದೇಶದಿಂದ ಬಂದ ಹಿಂದುಗಳು ಎಲ್ಲಿಗೆ ಹೋಗಬೇಕು. ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ , ಅನಾಥರಾಗಿ ಬಿಡಲು ಸಾಧ್ಯವೇ? ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ.
5) ಬೈ ಎಲೆಕ್ಷನ್‌ನಲ್ಲಿ ಗೆದ್ದು ಬೀಗಿದ BJP: ಸಿಹಿ ತಿಂದು ವಿಜಯೋತ್ಸವ ಆಚರಿಸಿದ ಶಾ
15 ಕ್ಷೇತ್ರಗಳಲ್ಲಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದ ರಾಜ್ಯ ಬಿಜೆಪಿಗೆ ಹೈಕಮಾಂಡ್ ಫುಲ್ ಫಿದಾ ಆಗ್ಬಿಟ್ಟಿದೆ. ಹಗಲಿರುಳು ಸುತ್ತಾಡಿ ಸರ್ಕಾರ ಸೇಫ್ ಮಾಡಿಕೊಂಡಿರುವ ಯಡಿಯೂಪ್ಪಗೆ ಹೈಕಮಾಂಡ್ ಇದೇ ಮೊದಲ ಬಾರಿಗೆ ಅಭಿನಂದಿಸಿದೆ. ಅದರಲ್ಲೂ ಇಂದು ಅಮಿತ್ ಶಾ ಸಿಹಿ ತಿಂದು ವಿಜಯೋತ್ಸವ ಆಚರಿಸಿದ್ದಾರೆ.
6) ಟೀಂ ಇಂಡಿಯಾದ 1 ಸ್ಥಾನಕ್ಕೆ ಕನ್ನಡಿಗರಿಬ್ಬರ ಫೈಟ್!
ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕೆ ಕನ್ನಡಿಗರಿಬ್ಬರು ಹೋರಾಟ ನಡೆಸುತ್ತಿದ್ದಾರೆ. ಈ ಪೈಪೋಟಿ ಆರಂಭವಾಗಿದ್ದು ಶಿಖರ್ ಧವನ್ ಇಂಜುರಿಯಾಗಿ ತಂಡದಿಂದ ಹೊರಬಿದ್ದಾಗ. ಧವನ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಮತ್ತೊರ್ವ ಕನ್ನಡಿಗನಲ್ಲಿ ನಡುಕ ಹುಟ್ಟಿಸಿದೆ.
7) ಕತ್ರಿನಾ ಹಿಂದಿಕ್ಕಿ ಸೆಕ್ಸಿಯಸ್ಟ್ ಪಟ್ಟ ಏರಿದ ಬಿಗ್ ಬಾಸ್ ಸುಂದರಿ, ಸಖತ್ ಹಾಟ್ ಮಗಾ!...
ಬಾಲಿವುಡ್ ತಾರೆ ಹೀನಾ ಖಾನ್ ಮತ್ತೊಂದು ಗೌರವ ತಮ್ಮದಾಗಿರಿಸಿಕೊಂಡಿದ್ದಾರೆ. ಏಷ್ಯಾದ ಅತ್ಯಂತ ಸೆಕ್ಸಿಯಸ್ಟ್ ಮಹಿಳೆಯರ ಸಾಲಿನಲ್ಲಿ ಹೀನಾ ಖಾನ್ ಗೆ ಮೂರನೇ ಸ್ಥಾನ ಲಭಿಸಿದೆ.
8) ಬಿಗ್ ಬ್ರೇಕಿಂಗ್: ಅಂಬಾನಿ 3 ವರ್ಷಗಳ ‘ಪ್ಲ್ಯಾನ್’ ಬಹಿರಂಗ
10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಗಳಿಸುವ ಮೂಲಕ ವ್ಯಾಪಾರ ಕ್ಷೇತ್ರದ ಅಧಿಪತಿಯಾಗಿರುವ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಲಿದ್ದಾರೆ ಎಂದರೆ ಅದು ನಿಮ್ಮ ತಪ್ಪು ಕಲ್ಪನೆ ಆದೀತು. ಇದೀಗ ಅಂಬಾನಿ 3 ವರ್ಷಗಳ ‘ಪ್ಲ್ಯಾನ್’ ಬಹಿರಂಗವಾಗಿದೆ.
9) CAB: ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು!
ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಹಿಂಸಾರೂಪ ತಾಳಿದೆ. ಅಸ್ಸಾಂನಲ್ಲಿ ಪ್ರತಿಭಟನಾಕಾರರು ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ್ದು, ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.
10) ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!...
ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಹೈದಾರಾಬಾದ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಅಸಾದುದ್ದೀನ್, ಅನಮ್ ಕೈ ಹಿಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.