ಚುನಾವಣೆಗೆ ಒತ್ತಾಯಿಸಿದ ಕಾಂಗ್ರೆಸ್, 2ನೇ ದಿನವೂ ಶತಕ ಸಿಡಿಸಿದ ವೈರಸ್; ಮೇ.22ರ ಟಾಪ್ 10 ಸುದ್ದಿ!

Suvarna News   | Asianet News
Published : May 22, 2020, 05:51 PM IST
ಚುನಾವಣೆಗೆ ಒತ್ತಾಯಿಸಿದ ಕಾಂಗ್ರೆಸ್, 2ನೇ ದಿನವೂ ಶತಕ ಸಿಡಿಸಿದ ವೈರಸ್; ಮೇ.22ರ ಟಾಪ್ 10 ಸುದ್ದಿ!

ಸಾರಾಂಶ

ಕರ್ನಾಟಕದಲ್ಲಿ ಇಂದು ಒಂದೇ ದಿನ 105 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ಆದರೆ ಕೊರೋನಾ ಭೀತಿ ನಡುವೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಇದೀಗ ಕಾಂಗ್ರೆಸ್ ಚುನಾವಣೆಗೆ ಒತ್ತಾಯಿಸಿ ಚುನಾವಣಾ ಆಯೋಗದ ಮೊರೆ ಹೋಗಿದೆ. ಮಂಗಳೂರು ವಿಮಾನ ದುರಂತ ರೀತಿಯಲ್ಲೇ ಹಾಗೂ ಅದೇ ದಿನ ಪಾಕಿಸ್ತಾನದಲ್ಲಿ 107 ಮಂದಿಯನ್ನು ಹೊತ್ತ ವಿಮಾನ ಪತನಗೊಂಡಿದೆ.  ನಟಿ ಶ್ರೀದೇವಿ ಮನೆಯಲ್ಲಿ ಹೆಚ್ಚಾದ ಕೊರೋನಾ ವೈರಸ್, ವರ್ಷಾಂತ್ಯದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಸೇರಿದಂತೆ ಮೇ.22ರ ಟಾಪ್ 10 ಸುದ್ದಿ ಇಲ್ಲಿವೆ.

10, 12ನೇ ತರಗತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ...

10 ಮತ್ತು 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯಲಿದೆ. 

ಚುನಾವಣೆ ಆಯೋಗ ಮೊರೆ ಹೋದ ಕಾಂಗ್ರೆಸ್: ರಾಜ್ಯದಲ್ಲಿ ರಂಗೇರಿದ ರಾಜಕೀಯ

ಕೊರೋನಾ ಭೀತಿ ನಡುವೆ ರಾಜ್ಯದಲ್ಲಿ ರಾಜಕೀಯ ಜೋರಾಗಿದೆ. ಅದರಲ್ಲೂ ಕಾಂಗ್ರೆಸ್ ಚುನಾವಣೆ ಆಯೋಗ ಮೊರೆ ಹೋಗಿರವುದು ರಾಜ್ಯ ರಾಜಕಾರಣ ಮತ್ತಷ್ಟು ರಂಗೇರಿದೆ.

ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!

ಕೊರೋನಾ ಅಟ್ಟಹಾಸದ ನಡುವೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ನೀಡಲು ವಿವಿಧ ಕ್ರಮಗಳನ್ನು ಘೋಷಿಸಿದ್ದು, ಪ್ರಮುಖವಾಗಿ ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ.

ದೇಶದಲ್ಲಿ ಒಂದೇ ದಿನ 5700 ಮಂದಿಗ ಸೋಂಕು: 139 ಜನರ ಸಾವು!

ಹಂತಹಂತವಾಗಿ ಲಾಕ್‌ಡೌನ್‌ ತೆರವಾಗುತ್ತಲೇ, ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯೂ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಂಪ್ರದಾಯ ಮುಂದುವರೆದಿದೆ.

ಕತಾರ್‌ನಿಂದ ಬೆಂಗಳೂರಿಗೆ ಬಂದಿಳಿಯಲಿದ್ದಾರೆ 185 ಕನ್ನಡಿಗರು

ಕತಾರ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಕಟಿಸಿದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ಹರಿಸಿತ್ತು. ಸುವರ್ಣ ನ್ಯೂಸ್ ವರದಿಗೆ ಕನ್ನಡಿಗರು ಧನ್ಯವಾದ ಅರ್ಪಿಸಿದ್ದಾರೆ.

ಟೆಸ್ಟ್ ಸರಣಿಗಾಗಿ ವರ್ಷಾಂತ್ಯದಲ್ಲಿ ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ಪ್ರವಾಸ?

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಕ್ರಿಕೆಟ್ ಟೂರ್ನಿಗಳು ಶೀಘ್ರದಲ್ಲೇ ಆರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿದೆ. ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಕುರಿತು ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಗೆ ಕಸರತ್ತು ಆರಂಭಿಸಿದೆ.


ಪೊಲೀಸರಿಂದ ಕಾಟಾಚಾರದ ಚೆಕ್; ಬೆಂಗಳೂರಿಗೆ ತಮಿಳುನಾಡಿನ ಡೆಡ್ಲಿ ವೈರಸ್ ಎಂಟ್ರಿ..!...

ತಮಿಳಿನಾಡಿನಿಂದ ಬೈಕ್, ಸ್ಕೂಟರ್‌ಗಳಲ್ಲಿ ಬರುತ್ತಿದ್ದು, ಕಂಪನಿ ಐಡಿ ಕಾರ್ಡ್ ತೋರಿಸಿ ಬೆಂಗಳೂರಿಗೆ ತಮಿಳಿಗರು ಎಂಟ್ರಿ ಕೊಡುತ್ತಿದ್ದಾರೆ. ಗಡಿಯಲ್ಲಿ ಪೊಲೀಸರಿಂದ ಕಾಟಾಚಾರದ ತಪಾಸಣೆ ನಡೆಸುತ್ತಿದ್ದಾರೆ.

ಶ್ರೀದೇವಿ ಮನೆಯಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕೇಸ್; ಪುತ್ರಿಯರದ್ದೇ ಆತಂಕ!...


ಬಾಲಿವುಡ್‌ನಲ್ಲಿ ಶುರುವಾಗಿದೆ ಕೊರೋನಾ ವೈರಸ್‌ ಆತಂಕ ಬೋನಿ ಕಪೂರ್‌ ಮನೆಯಲ್ಲಿ ಇನ್ನಿಬ್ಬರಿಗೆ ಕೊರೋನಾ ಸೋಂಕು ದೃಢ. ಇದರಿಂದ ಬಾಲಿವುಡ್ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!...

ಲಾಕ್‌ಡೌನ್ 4.0 ಅಂತಿಮ ಹಂತಕ್ಕೆ ತಲುಪುತ್ತಿದೆ. ಇತ್ತ ಹಲವು ಕ್ಷೇತ್ರಗಳಿಗೆ ಲಾಕ್‌ಡೌನ್ ಸಡಿಲ ಮಾಡಲಾಗಿದೆ. ಇದರೊಂದಿಗೆ ಆಟೋಮೊಬೈಲ್ ಕ್ಷೇತ್ರ ಕೂಡ ಕಾರ್ಯಾರಂಭಿಸಿದೆ. ಇದೀಗ ಮಾರಾಟ ಹೆಚ್ಚಿಸಲು ಹಲವು ಕಂಪನಿಗಳು ಕಸರತ್ತು ಆರಂಭಿಸಿದೆ. ಇದರ ಅಂಗವಾಗಿ ಮಾರುತಿ ಸುಜುಕಿ ಹೊಸ ಸಾಲ ಸೌಲಭ್ಯ ನೀಡುತ್ತಿದೆ. ಈ ಮೂಲಕ ಕಾರು ಖರೀದಿ ಇನ್ನು ಸುಲಭವಾಗಿದೆ.

ಮಂಗಳೂರು ವಿಮಾನ ದುರಂತದ ದಿನವೇ ಪಾಕಿಸ್ತಾನದಲ್ಲಿ ವಿಮಾನ ಪತನ; 107 ಮಂದಿ ಸಜೀವ ದಹನ!

ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ 10 ವರ್ಷಗಳಾಗಿವೆ. ಈ ಘಟನೆ ಯಾರೂ ಮರೆತಿಲ್ಲ. ಇದೀಗ ಇಂತದ್ದೇ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. 107 ಮಂದಿ ಹೊತ್ತ ಪಾಕಿಸ್ತಾನ ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್‌ಗೂ ಮುನ್ನ ಅಪಘಾತಕ್ಕೀಡಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್