ಕುಮಾರಸ್ವಾಮಿ ಬಾಯಲ್ಲಿ ಸಾವಿನ ಮಾತು, ಇಲ್ಲಿದೆ ಅಸಲಿಯತ್ತು!

By Web DeskFirst Published Oct 26, 2018, 7:29 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ-ಮತ್ತೆ ಭಾವನಾತ್ಮಕ ಭಾಷಣ ಮಾಡುತ್ತಲೇ ಇದ್ದಾರೆ. ವಿಧಾನಸಭೆ ಚುನಾವಣಾ ಪ್ರಚಾರದ ವೇಳೆಯೂ ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ.. ಜನ ಸೇವೆಯ ಅವಕಾಶ ಮಾಡಿಕೊಡಿ ಎಂಬ ರೀತಿಯಲ್ಲಿ ಮಾತನಾಡಿದ್ದರು. ಇದೀಗ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯೂ ಅಂಥದ್ದೇ ಮಾತುಗಳನ್ನಾಡಿದ್ದಾರೆ. ಹಾಗಾದರೆ ಇದಕ್ಕೆ ಮೂಲ ಕಾರಣ ಏನು?

ಮಂಡ್ಯ[ಅ.26] ಪ್ರಣಾಳಿಕೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಿದ್ದ ಜೆಡಿಎಸ್ ವಿಧಾನಸಭಾ ಚುನಾವಣೆಯಲ್ಲಿ ಕೇವಲ 37 ಸ್ಥಾನ ಪಡೆದುಕೊಂಡರು ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು.  ಅಳೆದು-ತೂಗಿ ಸಾಲಮನ್ನಾಕ್ಕೆ ಅಂತಿಮ ರೂಪ ನೀಡಲಾಯಿತು.

ರಾಜರಾಜೇಶ್ವರಿ ವ್ಯಾಪ್ತಿಯ ಲಗ್ಗೆರೆಯಲ್ಲಿ ಮಾತನಾಡುತ್ತ ನನ್ನ ಸಾವು ಯಾವಾಗ ಬರುತ್ತದೆಯೋ? ಎಂದಿದ್ದ ಕುಮಾರಸ್ವಾಮಿ ಜೆಡಿಎಸ್ ಗೆಲ್ಲಿಸಿ ಎಂದು ಮನವಿ ಮಾಡಿದ್ದರು. ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಜೆಡಿಎಸ್ ನಿಂದ ಆಯೋಜಿಸಿದ್ದ ಸನ್ಮಾನದಲ್ಲಿ ಕಣ್ಣೀರು ಹಾಕಿದ್ದರು. ಇದೀಗ ಮಂಡ್ಯದಲ್ಲಿ ಮತ್ತೆ ಅಂತಹುದೆ ಮಾತುಗಳನ್ನಾಡಿದ್ದಾರೆ.

1. ಕಾಡುತ್ತಿರುವ ಅನಾರೋಗ್ಯ: ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಕುಮಾರಸ್ವಾಮಿ ಒಳಗಾಗಿದ್ದಾರೆ. ಒಮ್ಮೆ ಬೆಂಗಳೂರಿನಲ್ಲಿ ಆಗಿದ್ದರೆ ಮತ್ತೊಮ್ಮೆ ಸಿಂಗಪುರದಲ್ಲಿ ಚಿಕತ್ಸೆ ಪಡೆದುಕೊಂಡಿದ್ದರು. ಈ ವಾರ ಸಹ ಹೊಟ್ಟೆ ನೋವಿನಿಂದ ಇಡೀ ದಿನದ ಕಾರ್ಯಕ್ರಮ ರದ್ದು ಮಾಡಿದ್ದರು. ವಾಲ್ಮೀಕಿ ಜಯಂತಿಯಲ್ಲೂ ಭಾಗವಹಿಸಿರಲಿಲ್ಲ.

ಕುಡುಕರೆಲ್ಲ ಕುಮಾರಣ್ಣನ ಅಭಿಮಾನಿಗಳು...ಸಿಯೆಮ್ಮೇ ಹೇಳಿದ್ದು!

2. ಮೈತ್ರಿ ಸವಾಲು: ಒಂದು ಕಡೆ ಮೈತ್ರಿ ಸರಕಾರ ಮುನ್ನಡೆಸಿಕೊಂಡು ಹೋಗುವುದು ನಿಜಕ್ಕೂ ಸವಾಲು ಮತ್ತು ಒತ್ತಡದ ಕೆಲಸವೇ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಒಂದೆಲ್ಲಾ ಒಂದು ಒತ್ತಡಗಳು ಬರುತ್ತಲೇ ಇವೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿಯೂ ಶೀಘ್ರ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

3. ರಾಜಕಾರಣ: ಸಾವಿನ ಹೇಳಿಕೆ ನೀಡುವುದರ ಹಿಂದೆ ರಾಜಕಾರಣದ ಸಣ್ಣ ಅಂಶ ಇದ್ದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.  ಯಾವ ಪ್ರಮಾಣದಲ್ಲಿ ಲಾಭ ತಂದುಕೊಡುತ್ತದೆ ಎಂಬುದು ಸದ್ಯಕ್ಕೆ ಗೊತ್ತಾಗದಿದ್ದರೂ ನಷ್ಟವಂತೂ ಆಗಲ್ಲ ಎಂಬ ಭಾವನೆ ಇದೆ.

4. ಟೀಕೆಗೆ ಉತ್ತರ: ಕುಮಾರಸ್ವಾಮಿ ಮಾತನಾಡುತ್ತಲೇ ವಿಪಕ್ಷಗಳ ಟೀಕೆಗೂ ಉತ್ತರ ನೀಡಿದ್ದಾರೆ. ಕೆಲಸ ಮಾಡುವುದನ್ನು ತತಡೆಯುತ್ತಿದ್ದಾರೆ ಎಂಬ ಸೂಚನೆಯನ್ನು ರವಾನಿಸಿದ್ದಾರೆ.

5. ಎದುರಾಗಿರುವ ಲೋಕಸಭಾ ಚುನಾವಣೆ: ಮುಂದಿನ ಲೋಕಸಭಾ ಚುನಾವಣೆ ರಾಜ್ಯದ ಮಟ್ಟಿಗೆ ಅದರಲ್ಲೂ ಜೆಡಿಎಸ್ ಗೆ ನಿರ್ಣಾಯಕ. ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡೇ ಮುಂದುವರಿಯಬೇಕೋ? ಬೇಡವೋ? ಎಂಬ ಗೊಂದಲವೂ ಕಾಡುತ್ತಿರಬಹುದು.

click me!