ಪ್ರಧಾನಿ ಮೋದಿಗೆ ‘ನಮಕ್ ಹರಾಮ್’ ಎಂದ ಜಿಗ್ನೇಶ್!

By Web DeskFirst Published Oct 26, 2018, 6:49 PM IST
Highlights

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿದ ಜಿಗ್ನೇಶ್ ಮೇವಾನಿ! ಮೋದಿಯನ್ನು ‘ನಮಕ್ ಹರಾಮ್’ ಎಂದ ಜಿಗ್ನೇಶ್ ಮೇವಾನಿ! ಪಾಟ್ನಾದಲ್ಲಿ ನಡೆದ ಸಮಾವೇಶದಲ್ಲಿ ಮೋದಿ ವಿರುದ್ಧ ಕೀಳು ಪದ ಪ್ರಯೋಗ! ಜಿಗ್ನೇಶ್ ಮೇವಾನಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ

ನವದೆಹಲಿ(ಅ.26): ದಲಿತ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು "ನಮಕ್‌ ಹರಾಮ್‌'' ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪಾಟ್ನಾದ ಸಮಾವೇಶವೊಂದರಲ್ಲಿ ಮಾತನಾಡಿದ ಮೇವಾನಿ, ಇತ್ತೀಚಿಗೆ ಹೊರ ರಾಜ್ಯಗಳಿಂದ ಗುಜರಾತ್ ಗೆ ವಲಸೆ ಬರುತ್ತಿರುವ ಕಾರ್ಮಿಕರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿಯ ಜಾಣ ಮೌನವನ್ನು ಖಂಡಿಸಿದರು.

ಈ ಭರದಲ್ಲಿ ಪ್ರಧಾನಿ ಮೋದಿಯನ್ನು "ನಮಕ್‌ ಹರಾಮ್‌'' (ಅಪ್ರಾಮಾಣಿಕ) ಎಂದು ಹೇಳುವ ಮೂಲಕ ಮೇವಾನಿ ಹೊಸ ವಿವಾದ ಸೃಷ್ಟಿಸಿದ್ದಾರೆ.

Gujarat MLA Jignesh Mewani says,"UP aur Bihar ke mazdooron ko Gujarat mein maara gya, lekin Pradhan Mantri Ji ek line me ye appeal karne ko tayaar nahi ki hey Gujaratiyon,UP aur Bihar ke logon ke saath badtamizi band kariye.Isiliye, is namakharam ko pehchan lijiye".(25.10) pic.twitter.com/NFSI3crWNe

— ANI (@ANI)

ಗುಜರಾತ್‌ನ ಅಹ್ಮದಾಬಾದ್‌, ಸೂರತ್‌, ರಾಜ್‌ಕೋಟ್‌ ಮತ್ತು ಬರೋಡದಲ್ಲಿ ರಸ್ತೆ, ಸೇತುವೆ, ಫ್ಲೈ ಓವರ್‌ಗಳನ್ನು ನಿರ್ಮಿಸುವ ಕೆಲಸಕ್ಕಾಗಿ ಮಧ್ಯ ಪ್ರದೇಶ, ಜಾರ್ಖಂಡ್‌, ಯುಪಿ ಮತ್ತು ಬಿಹಾರದಿಂದ ಅಪಾರ ಸಂಖ್ಯೆಯ ಕಾರ್ಮಿಕರು ವಲಸೆ ಬರುತ್ತಾರೆ. ಈಚೆಗೆ ಸುಮಾರ 12ರಿಂದ 15 ದಿನಗಳ ಕಾಲ ಈ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿದೆ. ಆದರೆ  ಈ ಬಗ್ಗೆ  ಈ "ನಮಕ್‌ ಹರಾಮ್‌''  ಚಕಾರವನ್ನೂ ಎತ್ತಿಲ್ಲ ಎಂದು ಮೇವಾನಿ ಹೇಳಿದರು. 

ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ  "ಬಿಜೆಪಿ ಹಠಾವೋ ದೇಶ್‌ ಬಚಾವೋ' ಕಾರ್ಯಕ್ರಮದಲ್ಲಿ ಮೇವಾನಿ ಒಟ್ಟು 9 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಈ ವೇಳೆ  "ಶೇಮ್‌ ಆನ್‌ ಯೂ ನರೇಂದ್ರ ಮೋದಿ, ಶೇಮ್‌ ಆನ್‌ ಯೂ'' ಎಂದು ಕನಿಷ್ಠ ಬಾರಿ ಬಾರಿ ಕೂಗಿದರು.

ಇನ್ನು ಪ್ರಧಾನಿ ಕುರಿತ ಜಿಗ್ನೇಶ್ ಮೇವಾನಿ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ದೇಶದ ಪ್ರಧಾನಿ ಕುರಿತು ಈ ರೀತಿಯ ಪದ ಪ್ರಯೋಗ ಖಂಡನಾರ್ಹ ಎಂದು ಬಿಜೆಪಿ ಹರಿಹಾಯ್ದಿದೆ.

click me!