
ಮಂಡ್ಯ[ಅ.26] ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಷಣ ಆರಂಭ ಮಾಡುತ್ತಲೆ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಜೋರಾಗಿ ಮಾತನಾಡಲು ಆರಂಭಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದಾರೆ.
ಆದರೆ ಇದೆಲ್ಲವನ್ನು ನೋಡುತ್ತಿದ್ದ ಕುಮಾರಸ್ವಾಮಿ ‘ಬಿಡ್ರಿ ಪಾಪಾ.. ಅವರು ನಮ್ಮ ಅಭಿಮಾನಿಗಳು... ಅಂಥ ಹೇಳಿ ಮಾತು ಮುಂದುವರಿಸಿದ್ದಾರೆ.
ಐದು ತಿಂಗಳು ಸರ್ಕಾರದ ಅವಧಿ ಮುಗಿದಿದೆ. ಕಬ್ಬು ಮತ್ತು ರೇಷ್ಮೆ ಬೆಳೆಗಾರರು ನಮ್ಮ ಸಂಕಷ್ಟ ದ ಬಗ್ಗೆ ಮಾತಾಡಿ ಅಂತಾ ಕೇಳ್ತಿದಾರೆ. ಈ ಸರ್ಕಾರದಲ್ಲಿ ಮಾವು ಬೆಳೆಗೆ ಬೆಂಬಲ ಬೆಲೆ ಕೊಡುವ ಬಗ್ಗೆ ತೀರ್ಮಾನ ಮಾಡಿದ್ದೆವು. ರೇಷ್ಮೆ ಬೆಳೆ ಕುಸಿದಾಗಲೂ ಬೆಂಬಲ ಬೆಲೆ ಕೊಡುವ ನಿರ್ಧಾರ ಮಾಡಿದ್ದೇವೆ. ಯಾವುದೇ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಡಿ. ನಿಮಗೆ ನೋವು ಕೊಟ್ಟು ಆಡಳಿತ ಮಾಡಲ್ಲ ನಾನು ಎಂದು ಕುಮಾರಸ್ವಾಮಿ ತಮ್ಮ ಭಾಷಣದ ಉದ್ದಕ್ಕೂ ಭಾವನಾತ್ಮಕವಾಗಿಯೇ ಮಾತನಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.